

ವಿಜಯವಾಣಿ ಸುದ್ದಿಜಾಲ ಧಾರವಾಡ
ರಕ್ತದಾನ ಶ್ರೇಷ್ಠವಾದುದು. ತುರ್ತು ಸಂದರ್ಭಗಳಲ್ಲಿ ಜನರ ಜೀವ ಉಳಿಸಲು ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಯ ವೈದ್ಯ ಡಾ. ಉಮೇಶ ಹಳ್ಳಿಕೇರಿ ಹೇಳಿದರು.
ನಗರದ ಕರ್ನಾಟಕ ಕಲಾ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕ, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಘಟಕಗಳ ಸಹಯೋಗದಲ್ಲಿ ಡಾ. ವಿ.ಕೃ. ಗೋಕಾಕ ಗ್ರಂಥಾಲಯದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಪ್ರತಿದಿನ ಶೇ. 20ರಷ್ಟು ರೋಗಿಗಳಿಗೆ ರಕ್ತ ಸಿಗುತ್ತಿಲ್ಲ. ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ರಕ್ತದಾನ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಐ.ಸಿ. ಮುಳಗುಂದ ಮಾತನಾಡಿ, ರಕ್ತಕ್ಕೆ ಪಯÁðಯ ಯÁವುದೂ ಇಲ್ಲ. ರಕ್ತ ಸಿಗದೆ ಪ್ರತಿದಿನ ಸಾವಿರಾರು ಜನ ಮರಣ ಹೊಂದುತ್ತಿದ್ದಾರೆ. ಹೀಗಾಗಿ ಯುವಕರಲ್ಲಿ ರಕದಾನದ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.
ವಿದ್ಯಾರ್ಥಿಗಳಿ0ದ 60 ಯುನಿಟ್ ರಕ್ತ ಸಂಗ್ರಹವಾಯಿತು. ಮಹಾಂತೇಶ ವೀರಾಪೂರ, ಎಸ್.ಜಿ. ಚಲವಾದಿ, ಡಾ. ಮುಕುಂದ ಲಮÁಣಿ, ಎನ್‌ಸಿಸಿ ಅಽಕಾರಿ ಡಾ. ವೈ.ಎಸ್. ರಾವುತ, ಎನ್‌ಎಸ್‌ಎಸ್ ಅಽಕಾರಿ ಡಾ. ಎಸ್.ಎ. ಕೋಳೂರ, ಡಾ. ಸ್ಟೆಲ್ಲಾ ಸ್ಟಿವನ್, ಡಾ. ವಾಮದೇವ ತಳವಾರ, ಇತರರಿದ್ದರು.