

ಸುಬ್ರಹ್ಮಣ್ಯ: ಅಮರ ತಾಲೂಕು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ಗ್ರಾಮ ಪಂಚಾಯಿತಿ ಗುತ್ತಿಗಾರು, ಆರೋಗ್ಯ ಕೇಂದ್ರ ಗುತ್ತಿಗಾರು, ಜಿಲ್ಲಾ ಮತ್ತು ತಾಲೂಕು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮಂಗಳೂರು, ಸುಳ್ಯ ಅಮರ ಸಂಜೀವಿನಿ ಒಕ್ಕೂಟ ಗುತ್ತಿಗಾರು, ಲಯನ್ಸ್ ಕ್ಲಬ್ ಹಿರಿಯಡ್ಕ, ಲಯನ್ಸ್ ಕ್ಲಬ್ ಗುತ್ತಿಗಾರು ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ರಕ್ತದಾನಿಗಳಿಗೆ ಸನ್ಮಾನ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮ ಗುತ್ತಿಗಾರಿನಲ್ಲಿ ನಡೆಯಿತು. 65 ಮಂದಿ ರಕ್ತದಾನ ಮಾಡಿದರು.
ಸಾಮಾಜಿಕ ಮುಖಂರಾದ ಭರತ್ ಮುಂಡೋಡಿ, ಮುಳಿಯ ಕೇಶವ್ ಭಟ್ ಮತ್ತು ಅಶೋಕ್ ನೆಕ್ರಾಜೆ ಅವರನ್ನು ಗೌರವಿಸಲಾಯಿತು. ರಕ್ತದಾನ ಮಾಡಿದ ಪ್ರತಿಯೊಬ್ಬರನ್ನು ಸನ್ಮಾನಿಸಲಾಯಿತು. ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ವೆಂಕಟ್ ದಂಬೆಕೋಡಿ, ತಾಲೂಕು ಭಾರತೀಯ ರೆಡ್‌ಕ್ರಾಸ್ ಸಭಾಪತಿ ಸುಧಾಕರ್ ರೈ, ಹಿರಿಯಡ್ಕ ಲಯನ್ಸ್ ಅಧ್ಯಕ್ಷ ಸುಧೀರ್, ನಿವೃತ್ತ ಸೈನಿಕ ರವೀಂದ್ರನಾಥ್ ಮುಖ್ಯ ಅತಿಥಿಗಳಾಗಿದ್ದರು.
ಗುತ್ತಿಗಾರು ಲಯನ್ಸ್ ಅಧ್ಯಕ್ಷ ಕುಶಾಲಪ್ಪ ಮಾಸ್ತರ್, ಅಮರ ಸಂಜೀವಿನಿ ಒಕ್ಕೂಟ ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ, ಅಮರ ತಾಲೂಕು ಪಬ್ಲಿಕ್ ಚಾರಿಟೆಬಲ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ನಿವೃತ್ತ ಪಿಡಿಒ ಪುರುಷೋತ್ತಮ್ ಮನಿಯಾನಮನೆ, ಪಂಚಾಯಿತಿ ಸದಸ್ಯೆ ಲತಾ ಕುಮಾರಿ ಅಜಡ್ಕ, ಆರೋಗ್ಯ ಪರಿವೀಕ್ಷಕ ಬಸವರಾಜ್, ತಾಲೂಕು ರೆಡ್‌ಕ್ರಾಸ್ ನಿರ್ದೇಶಕರಾದ ಶಿವಪ್ರಸಾದ್ ಕಡವೆಪಳ್ಳ, ಮಿತ್ರ ಕುಮಾರಿ ಚಿಕ್ಮುಳಿ, ಯಮಿತ ಪೂರ್ಣಚಂದ್ರ ಇದ್ದರು.