ಸಂಜೀವಿನಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

Published on

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿರುವ ಸಂಜೀವಿನಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯು, ರಾಷ್ಟ್ರೊತ್ಥಾನ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಮಂಗಳವಾರ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಿತ್ತು.

ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ ಶಿಬಿರ ಉದ್ಘಾಟಿಸಿ ಮಾತನಾಡಿ, ಕೋವಿಡ್ ಸಾಂಕ್ರಾಮಿಕದ ನಂತರ ಸ್ವಯಂ ಪ್ರೇರಿತ ರಕ್ತದಾನದ ಸಂಖ್ಯೆಯು ಣಿಸುತ್ತಿದ್ದು, ಇಂತಹ ಶಿಬಿರಗಳು ಅಗತ್ಯವಾಗಿವೆ. ದಾನಿಗಳು ಸ್ವಯಂ ಪ್ರೇರಣೆಯಿಂದ ಅತ್ಯಂತ ಶ್ರೇಷ್ಠ ದಾನಗಳಲ್ಲಿ ಒಂದಾದ ರಕ್ತದಾನವನ್ನು ಮಾಡಲು ಮುಂದಾಗಬೇಕು ಎಂದರು.

ಸಂಸ್ಥೆಯ ಪ್ರಾಂಶುಪಾಲ ಡಾ. ಚರಂತಯ್ಯ ಹಿರೇಮಠ ಮಾತನಾಡಿ, ರಕ್ತದಾನ ಮಾಡುವದರಿಂದ ಇನ್ನೊಬ್ಬರಿಗೆ ಜೀವದಾನ ಮಾಡಿದಂತೆ ಹಾಗೂ ಅದು ರಕ್ತದಾನ ಮಾಡಿದವರ ಆರೋಗ್ಯವನ್ನು ಕೂಡಾ ಉತ್ತಮಗೊಳಿಸುತ್ತದೆ ಎಂದರು.

ಅದ್ವಿತಿಯ ವಿದ್ಯಾಥಿರ್ ಸಂದ ಅಧ್ಯ ಡಾ. ಗೌರೀಶ ಅಸುಟಿ, ಪ್ರಾಧ್ಯಾಪಕ ಡಾ. ರಾಮಪ್ಪಾ ತೇಗೂರ, ಡಾ. ಶಿಲ್ಪಾ ಘಾಟಗೆ ಪಾಲ್ಗೊಂಡಿದ್ದರು.
ರಾಷ್ಟ್ರೊತ್ಥಾನ ರಕ್ತಕೇಂದ್ರದ ಶ್ರೀಧರ ಹಳಿಯಾಳ, ವಿನಾಯಕ ದೇಶಪಾಂಡೆ, ಬಸವರಾಜ ಶಿಬಿರ ಆಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net