ರಕ್ತದಾನಕ್ಕಿಂತ ಶ್ರೇಷ್ಠದಾನ ಇನ್ನೊಂದಿಲ್ಲ

02M.D.R.2
Published on

ಮದ್ದೂರು: ರಕ್ತದಾನ ಮಹಾದಾನ, ಅದಕ್ಕಿಂತ ಶ್ರೇಷ್ಠದಾನ ಇನ್ನೊಂದಿಲ್ಲ, ಬೇರೆಯುವರ ಜೀವ ಉಳಿಸಲು ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಬಹುದು ಎಂದು ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಆಶಾಲತಾ ತಿಳಿಸಿದರು.

ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಮಹಾತ್ಮ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಹುತಾತ್ಮ ಯೋಧರ ಸ್ಮರಣಾರ್ಥ ತಾಲೂಕಿನ ವಿವಿಧ ಸಂಘ, ಸಂಸ್ಥೆಗಳ, ಯುವಕ ಮಿತ್ರರು, ವಿಮ್ಸ್ ರಕ್ತನಿಧಿ ಕೇಂದ್ರ ಮಂಡ್ಯ, ಮಹಿಳಾ ಸರ್ಕಾರಿ ಕಾಲೇಜು, ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಬೃಹತ್ ರಕ್ತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಿಯಮಿತವಾಗಿ ವೈದ್ಯರ ಮಾಹಿತಿ ಪಡೆದು ರಕ್ತದಾನ ಮಾಡುವುದರಿಂದ ವ್ಯಕ್ತಿ ತೂಕ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹೃದ್ರೋಗ, ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳ ಅಪಾಯ ದೂರವಾಗುತ್ತದೆ ಹಾಗೂ ಮಾನಸಿಕ ನೆಮ್ಮದಿ ಸಿಗುತ್ತದೆ. ಇದರ ಜತೆಗೆ ಸಂಕಷ್ಟದಲ್ಲಿರುವ ಜೀವಗಳನ್ನು ಉಳಿಸಿದ ತೃಪ್ತಿ ನಮ್ಮದಾಗುತ್ತದೆ ಎಂದರು.

ಪ್ರತಿವರ್ಷ ದೇಶದ 41 ಲಕ್ಷ ಯೂನಿಟ್ ರಕ್ತ ಜನರಿಗೆ ಬೇಕಾಗಿದೆ. ಸರಿಯಾದ ಸಮಯಕ್ಕೆ ಅವರಿಗೆ ರಕ್ತ ನೀಡಿ ಜೀವ ಉಳಿಸಬೇಕಾಗಿದೆ. ರಕ್ತಕ್ಕೆ ಪರ್ಯಾಯ ವಸ್ತು ಯಾವುದಿಲ್ಲ ಎಂಬುವುದನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ, ಆರೋಗ್ಯಾಧಿಕಾರಿ ಮಣಿ, ಪ್ರಾಂಶುಪಾಲ ನಾರಾಯಣ್, ಉಪನ್ಯಾಸಕರಾದ ಪ್ರೊ.ಮಹೇಶ್‌ಕುಮಾರ್, ಪ್ರೊ.ಕೆ.ಟಿ.ವೆಂಕಟೇಶ್, ಪ್ರೊ.ಮಹದೇವ, ನಮ್ರತಾ, ಡಾ.ಸಿ.ಪಿ.ಕೃಷ್ಣ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ, ಮುಖಂಡರಾದ ಶಿವಪ್ರಸಾದ್, ಗಣೇಶ್, ವೆಂಕಟೇಶ್, ಸುಧೀರ್, ಎಂ.ಎಚ್.ನವೀನ್, ರಾಜೇಶ್, ಎಸ್.ಅಶೋಕ್, ಕುಂದನಕುಪ್ಪೆ ಕುಮಾರ್, ಚಾಮನಹಳ್ಳಿ ಮಂಜು, ಎಸ್.ಸಿ.ರಮೇಶ್, ಆಬಲವಾಡಿ ಅನಿಲ್, ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net