ರಕ್ತದಾನದಿಂದ ಆರೋಗ್ಯ ವೃದ್ಧಿ

30ss2Raktadaanigalu
Published on

ಶನಿವಾರಸಂತೆ: ಆರೋಗ್ಯವಂತ ವ್ಯಕ್ತಿ ಕಾಲಕಾಲಕ್ಕೆ ರಕ್ತದಾನ ಮಾಡುವ ಮೂಲಕ ಇತರರ ಜೀವ ಉಳಿಸಲು ಸಹಕಾರಿಯಾಗಬೇಕು ಎಂದು ಮಡಿಕೇರಿ ರಕ್ತ ನಿಧಿ ಕೇಂದ್ರದ ಅಧಿಕಾರಿ ಡಾ.ಕೆ.ಕರುಂಬಯ್ಯ ಕರೆ ನೀಡಿದರು.

ಈದ್ ಮಿಲಾದ್ ಅಂಗವಾಗಿ ಶನಿವಾರಸಂತೆ ಮಿಲಾದ್ ಕಮಿಟಿಯಿಂದ ಪಟ್ಟಣದ ಈದ್ಗಾ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಆರೋಗ್ಯವಂತ ವ್ಯಕ್ತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದು ಆರೋಗ್ಯ ವೃದ್ಧಿಗೆ ಸಹಕಾರಿ, ರಕ್ತದೊತ್ತಡ ನಿವಾರಣೆ, ಹೃದಯ ಸಂಬಂಧಿ ಕಾಯಿಲೆಯಿಂದ ದೂರಾಗಲು ರಕ್ತದಾನ ಸಹಕಾರಿ ಎಂದು ಹೇಳಿದರು.

ಶನಿವಾರಸಂತೆ ಜಾಮೀಯ ಮಸೀದಿ ಅಧ್ಯಕ್ಷ ಜಾನಾಬ್ ರಿಶಾತ್ ಪಾಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೌಲಾನ ಸಾಧಿಕ್, ಮುನ್ನಾವರ್ ಪಾಷ, ಮಹಮ್ಮದ್ ಶಾದಿಕ್, ಅಕ್ಮಲ್ ಪಾಷ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net