ರೋಗ ಬಾಧಿಸದಂತೆ ವಹಿಸಿ ಮುಂಜಾಗ್ರತೆ : ರಕ್ತದಾನ ಶಿಬಿರ ಉದ್ಘಾಟಿಸಿ ಎನ್.ಪ್ರಕಾಶ್ ಸಲಹೆ

New Project (2)
Published on

ಬಂಟ್ವಾಳ: ರೋಗಗಳಿಗೆ ಚಿಕಿತ್ಸೆ ಪಡೆಯುವ ಬದಲು ರೋಗ ಬಾಧಿಸದಂತೆ ಮುಂಜಾಗರೂಕತೆ ವಹಿಸುವುದರ ಜತೆಗೆ ವೈದ್ಯಕೀಯ ಉಚಿತ ತಪಾಸಣೆ ಶಿಬಿರಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ರೋಟರಿ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ್ ಹೇಳಿದರು.

ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಮತ್ತು ವಲಯ ಬಂಟರ ಸಂಘ ಸಹಿತ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಮತ್ತು ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಸಿದ್ದಕಟ್ಟೆಯಲ್ಲಿ ಭಾನುವಾರ ಆಯೋಜಿಸಿದ್ದ ರಕ್ತದಾನ ಮತ್ತು ವೈದ್ಯಕೀಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಿವತ್ತ ಪ್ರಾಂಶುಪಾಲ ಪ್ರೊ.ಜಯಕುಮಾರ್ ಶೆಟ್ಟಿ, ಹೃದ್ರೋಗ ತಜ್ಞ ಡಾ.ಪುರುಷೋತ್ತಮ ರಾಮಯ್ಯ, ಡಾ.ಸಂಗೀತ ಶೆಟ್ಟಿ ಸಿದ್ದಕಟ್ಟೆ ಶುಭಹಾರೈಸಿದರು. ಬಳಿಕ ಹದ್ರೋಗ ತಜ್ಞ ಡಾ.ಪುರುಷೋತ್ತಮ ರಾಮಯ್ಯ ಅವರಿಗೆ ಸನ್ಮಾನ ಮತ್ತು ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಅಂಚೆ ಇಲಾಖೆ ಆರೋಗ್ಯ ವಿಮೆ ಬಗ್ಗೆ ಗುರುಪ್ರಸಾದ್ ಮಾಹಿತಿ ನೀಡಿದರು.

ರೋಟರಿ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪ್ರಕಾಶ್, ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗದಾಸ್ ಶೆಟ್ಟಿ ಕರೆಂಕಿಜೆ ಮತ್ತಿತರರಿದ್ದರು.

ಸಂದೀಪ್ ಶೆಟ್ಟಿ ಪೊಡುಂಬ ಸ್ವಾಗತಿಸಿದರು. ಕಿರಣ್ ಕುಮಾರ್ ಮಂಜಿಲ ಪ್ರಸ್ತಾವನೆಗೈದರು. ವಿಜಯ ಫರ್ನಾಂಡಿಸ್ ವಂದಿಸಿದರು. ಸುಭಾಸ್ ಸಂಗಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net