ರಕ್ತದಾನದ ಮಹತ್ವ, ಅಗತ್ಯತೆ ಅರಿಯಿರಿ

19 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಕ್ತದಾನದಿಂದ ಒಂದು ಜೀವವನ್ನು ಉಳಿಸಲು ಸಾಧ್ಯ. ರಕ್ತದಾನದ ಮಹತ್ವ ಮತ್ತು ಅಗತ್ಯತೆಯನ್ನು ಅರಿತು ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡಬೇಕು. ಇದರಿಂದ ಅಗತ್ಯವುಳ್ಳವರು ಮತ್ತು ದಾನಿಗಳಿಗೂ ಪ್ರಯೋಜನವಾಗುತ್ತದೆ ಎಂದು ಧಾರವಾಡ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ. ಎಂ.ಎ0. ಹಿರೇಮಠ ಹೇಳಿದರು.

ನಗರದ ವೈ.ಬಿ. ಅಣ್ಣಿಗೇರಿ ವಾಣಿಜ್ಯ ಪದವಿ ಮಹಾವಿದ್ಯಾಲಯವು ಧಾರವಾಡ ರಕ್ತ ಭಂಡಾರದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಅಣ್ಣಿಗೇರಿ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗೇಶ ವೈ. ಅಣ್ಣಿಗೇರಿ ಮಾತನಾಡಿ, ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪು ತಿಳಿವಳಿಕೆ ಇದೆ. ರಕ್ತದಾನದ ಮಹತ್ವ ಮತ್ತು ಪ್ರಯೋಜನವನ್ನು ಅರಿತುಕೊಂಡು ರಕ್ತದಾನ ಮಾಡಬೇಕು ಎಂದರು.

ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಪ್ರಾಚಾರ್ಯ ಪ್ರೊ. ನಿತ್ಯಾನಂದ ಖಾತಗಾರ, ಹಿರಿಯ ಉಪನ್ಯಾಸಕ ವಿ.ಆರ್. ಹಿರೇಮಠ ವೇದಿಕೆಯಲ್ಲಿದ್ದರು. ಪ್ರೊ. ಅಕ್ಷಯ ನಿರೂಪಿಸಿದರು.

ಪ್ರೊ. ಮೇಘಾ, ಪ್ರೊ. ಪೂಜಾ, ಪ್ರೊ. ಬಿ.ಎಸ್. ನಾಯ್ಕರ ಹಾಗೂ ರಕ್ತ ಭಂಡಾರದ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net