ಸ್ವಯಂ ರಕ್ತದಾನದಿಂದ ಇತರರಿಗೆ ಪ್ರೇರಣೆ: ಮಂಜುನಾಥ್ ಟಿ. ಆಶಯ

16
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ರಕ್ತದಾನ ಶ್ರೇಷ್ಠ ದಾನ. ತುರ್ತು ಸಂದರ್ಭದಲ್ಲಿ ರಕ್ತದಾನದಿಂದ ಜೀವ ದಾನ ಮಾಡಬಹುದು. ಇದರಿಂದ ವೈಯಕ್ತಿಕವಾಗಿಯೂ ಲಾಭವಿದ್ದು ಕೊಲೆಸ್ಟರಾಲ್ ಕಡಿಮೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಸ್ವಯಂ ರಕ್ತದಾನ ಮಾಡುವುದರ ಜತೆಗೆ ಮತ್ತೊಬ್ಬರನ್ನು ರಕ್ತದಾನಕ್ಕೆ ಪ್ರೇರೆಪಿಸಬೇಕು ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಮಂಜುನಾಥ್ ಟಿ. ಹೇಳಿದರು.

ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ನೇತೃತ್ವದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಸೇವಾಂಜಲಿ ಸಭಾಂಗಣದಲ್ಲಿ ಭಾನುವಾರ 131ನೇ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ತಾಲೂಕು ಕಚೇರಿ ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಮುಖ್ಯ ಅತಿಥಿಯಾಗಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿದರು. ತಾಪಂ ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಜಯರಾಂ ತುಂಬೆ, ಕೆಎಂಸಿ ಬ್ಲಡ್ ಬ್ಯಾಂಕಿನ ದೇವ ಸ್ಮಿತಾ ಉಪಸ್ಥಿತರಿದ್ದರು. ಸೇವಾಂಜಲಿ ಟ್ರಸ್ಟಿ ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಚಂದ್ರಹಾಸ ಕಡೆಗೋಳಿ, ಜಗದೀಶ ಕಡೆಗೋಳಿ, ಅರ್ಕುಳ ಪಂಚಾಯಿತಿ ಸದಸ್ಯ ಪ್ರವೀಣ್ ಅರ್ಕುಳ, ಶೇಖರ್ ಪೂಜಾರಿ ಕಲ್ಲತಡಮೆ, ಪದ್ಮನಾಭ ಕಿದೆಬೆಟ್ಟು, ಮೋಹನ್ ಬೆಂಜನಪದವು, ಪ್ರಶಾಂತ್ ತುಂಬೆ, ದಿವಾಕರ ನರಿಕೊಂಬು, ಶಿವರಾಜ್ ಸುಜೀರ್, ಸುಕೇಶ್ ಚೌಟ ತೇವು, ಯೋಗೀಶ್ ಸುಜೀರ್, ಉಮೇಶ್ ಮೇರಮಜಲು ಸಹಕರಿಸಿದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ, ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net