

ಹುಬ್ಬಳ್ಳಿ: ಅಸೋಸಿಯೇಷನ್ ಆಫ್ ಸರ್ಜನ್ ಆಫ್ ಇಂಡಿಯಾ ಹು-ಧಾ ಶಾಖೆ ವತಿಯಿಂದ ಇಲ್ಲಿಯ ಕಿಮ್ಸ್‌ನಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು.
ಕೆಂಪು ಟಿ-ಶರ್ಟ್ ಧರಿಸಿದ್ದ ಶಸ್ತ್ರ ಚಿಕಿತ್ಸಕರು ಮತ್ತು ಸ್ನಾತಕೋತ್ತರ ಪದವೀಧರರು ರಕ್ತದಾನ ಮಾಡಿ ಗಮನ ಸೆಳೆದರು. 86ನೇ ಬಾರಿ ರಕ್ತದಾನ ಮಾಡಿದ ಡಾ. ಪ್ಯಾರ್‌ಅಲಿ ನೂರಾನಿ ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಐ. ಬಿಜಾಪೂರ, ಶಾಖೆ ಅಧ್ಯಕ್ಷ ಡಾ. ನಾರಾಯಣ ಹೆಬಸೂರ, ಸಂಘದ ಪದಾಧಿಕಾರಿಗಳಾದ ಡಾ. ಹರ್ಷ, ಡಾ. ಶಿಲ್ಪಾ, ಡಾ. ಗುರುಶಾಂತಪ್ಪ ಯಲಗಚ್ಚಿನ, ಡಾ. ಈಶ್ವರ ಹೊಸಮನಿ, ಡಾ. ಸುರೇಶ ಹುಚ್ಚಣ್ಣವರ, ಡಾ.ಕೆ.ಜಿ. ಬ್ಯಾಕೋಡಿ, ಕಿಮ್ಸ್ ರಕ್ತ ಭಂಡಾರದ ಡಾ. ಕವಿತಾ ಏವೂರ, ಡಾ. ಅನಿಲಕುಮಾರ ಇತರರು ಇದ್ದರು.