

ಹುನಗುಂದ: ಚಿತ್ತರಗಿ ಸಂಸ್ಥಾನ ಮಠದ ಮಹಾಂತ ಜೋಳಿಗೆಯ ಶಿವಶಿಲ್ಪಿಗಳು, ಬಸವತತ್ವದ ಹರಿಕಾರ ಲಿಂ. ಡಾ. ಮಹಾಂತ ಸ್ವಾಮಿಗಳ 94ನೇ ಜನ್ಮದಿನ ಪ್ರಯುಕ್ತ ರಕ್ತ ಗುಂಪು ತಪಾಸಣೆ, ಬೃಹತ್ ರಕ್ತದಾನ ಶಿಬಿರನ್ನು ಆ.1 ರಂದು ಬಸವಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ವಿಮವಿವ ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಹೇಳಿದರು.
ಪಟ್ಟಣದ ಬಸವಮಂಟಪದಲ್ಲಿ ಸೋಮವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಬಸವಕೇಂದ್ರ, ಸರ್ವಧರ್ಮ ಸೇವಾ ಸಮಿತಿ, ತಾಲೂಕು ಪತ್ರಕರ್ತರ ಸಂಘ ಮತ್ತು ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದೆ. ಒಬ್ಬರ ರಕ್ತದಾನದಿಂದ ಡೆಂೆ, ಬಿಳಿ ರಕ್ತ ಕಣಗಳು, ಕೆಂಪು ರಕ್ತಕಣ, ರಕ್ತಸ್ರಾವಕ್ಕೆ ಮತ್ತು ಪ್ರೆಸ್ ಪ್ರೋಸರ್ ಪ್ಲಾಸ್ಮಾ ಸೇರಿ 4 ಬಗೆಯಲ್ಲಿ ಉಪಯುಕ್ತವಾಗುತ್ತದೆ. ಆದ್ದರಿಂದ ರಕ್ತದಾನ ಶ್ರೇಷ್ಠವಾಗಿದೆ ಎಂದರು.
ಡಾ. ಶಿವಶಂಕರ ಮುದಗಲ್ ಮಾತನಾಡಿ, ಯುವಕರು, ಆರೋಗ್ಯವಂತ ಪುರುಷ, ಮಹಿಳೆಯರು ಪ್ರತಿ 6 ತಿಂಗಳಿಗೊಮ್ಮೆ ರಕ್ತದಾನ ಮಾಡಬಹದು. ಮನುಷ್ಯನಿಗೆ ಆಕಸ್ಮಿಕವಾಗಿ ಬರಬಹುದಾದ ಕ್ಯಾನ್ಸ್‌ರ್, ಕೊಲೆಸ್ಟ್ರಾಲ್, ಹೃದಯಾಘಾತ ಮತ್ತಿತರ ರೋಗಗಳು ಬರುವುದಿಲ್ಲ. ಕೃತಕ ರಕ್ತ ತಯಾರಿಸಲು ಸಾಧ್ಯವಿಲ್ಲ. ಒಬ್ಬರು ಮತ್ತೊಬ್ಬರಿಗೆ ರಕ್ತ ನೀಡಿ ಜೀವ ಉಳಿಸಲು ಸಾಧ್ಯ ಎಂದರು.
ವಿಮವಿವ ಸಂಘದ ನಿರ್ದೇಶಕ ಅರುಣೋದಯ ದುದ್ಗಿ ಮಾತನಾಡಿದರು.
ವಿ.ಮ. ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಸಂಗಣ್ಣ ಚಿನಿವಾಲರ, ನಿರ್ದೆಶಕರಾದ ಎಂ.ಎಸ್. ಮಠ, ರವಿ ಹುಚನೂರ, ರಾಚಪ್ಪ ರಾಜಮನಿ, ಶಿವಪ್ಪ ನಾಗೂರ, ವೀರೇಶ ಹುಲ್ಲಳ್ಳಿ, ರಾಮನಗೌಡ ಬೆಳ್ಳಿಹಾಳ, ಮಲ್ಲಪ್ಪ ತಾರಿವಾಳ, ಚನ್ನಬಸಪ್ಪ ತಾಳಿಕೋಟಿ ಆಡಳಿತಾಧಿಕಾರಿ ಆರ್.ಎಸ್. ಬ್ಯಾಳಿ, ಮುಖ್ಯಶಿಕ್ಷಕ ಬಿ.ಎಸ್. ಬನ್ನಟ್ಟಿ ಇದ್ದರು.