ನೂರಾರು ಜನರಿಂದ ರಕ್ತದಾನ

IMG_20251109_181538_982.jpg
Published on

ಹುಬ್ಬಳ್ಳಿ: ವಿಶ್ವ ಹಿಂದು ಪರಿಷತ್, ಬಜರಂಗ ದಳ ಮಹಾನಗರ ಜಿಲ್ಲಾ ಘಟಕದ ನೇತೃತ್ವದಲ್ಲಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೊತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ಭಾನುವಾರ ಇಲ್ಲಿಯ ಭವಾನಿನಗರ ರಾಘವೇಂದ್ರಸ್ವಾಮಿ ಮಠದ ಶ್ರೀ ಸುಜಯೀಂದ್ರ ಸಭಾಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಉಪಾಧ್ಯಕ್ಷ ಗೋವರ್ಧನ ರಾವ್, ಬಜರಂಗ ದಳದ ರಾಜ್ಯ ಸಂಚಾಲಕ ಶಿವಾನಂದ ಸತ್ತಿಗೇರಿ, ರಾಷ್ಟ್ರೊತ್ಥಾನ ರಕ್ತ ಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ, ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್.ಎಸ್. ಸಂಗೊಳ್ಳಿ, ರಘು ಎಲ್ಲಕ್ಕನವರ, ಪ್ರಶಾಂತ ನರಗುಂದ, ಬಜರಂಗದಳ ಮಹಾನಗರ ಸಂಯೋಜಕ ವಿಜಯ ಕ್ಷೀರಸಾಗರ, ಗೋರಕ್ಷಾ ಪ್ರಮುಖರು ಮತ್ತು ಇತರರು ಉಪಸ್ಥಿತರಿದ್ದರು.

ರಕ್ತದಾನ ಮಾಡಿದ ನೂರಾರು ಜನರಿಗೆ ರಕ್ತ ಕೇಂದ್ರದ ವತಿಯಿಂದ ಅಭಿನಂದಿಸಲಾಯಿತು. ಶಿಬಿರ ಸಂಯೋಜಕ ಸಿದ್ದು ಅಂಗಡಿ ಹಾಗೂ ಸಿಬ್ಬಂದಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net