ಯುವಜನರು ರಕ್ತದಾನದಲ್ಲಿ ಪಾಲ್ಗೊಳ್ಳಲಿ

ಫೋಟೋ ಶೀರ್ಷಿಕೆ 03 ಸಿಆರ್_ಪಿ-1ಎ,
Published on

ಚನ್ನರಾಯಪಟ್ಟಣ : ರಕ್ತದಾನ ಶಿಬಿರಗಳಿಂದ ಪಡೆಯುವ ರಕ್ತ ತುರ್ತು ಸಂದರ್ಭದಲ್ಲಿ ಅಗತ್ಯ ಉಳ್ಳವರಿಗೆ ಸುಲಭವಾಗಿ ಲಭಿಸಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಸೋಮವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 154ನೇ ಜನ್ಮದಿನೋತ್ಸವದ ಪ್ರಯುಕ್ತ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ರಕ್ತದ ಅಗತ್ಯ ಹೆಚ್ಚಿದೆ. ಆದ್ದರಿಂದ ರಕ್ತದಾನಿಗಳ ಅಗತ್ಯವೂ ಹೆಚ್ಚಿದೆ. ದಾನಿಗಳು ರಕ್ತ ನೀಡುವುದರಿಂದ ಅವರಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಅವರು ಮತ್ತಷ್ಟು ಚೈತನ್ಯದಿಂದ ಇರಲು ಸಾಧ್ಯವಾಗುತ್ತದೆ. ಜತೆಗೆ ಶರೀರದ ಅಂಗಗಳು ಕ್ರಿಯಾಶೀಲವಾಗಿ ಕೆಲಸ ಮಾಡಲು ಸಹಕಾರಿಯಾದಂತಾಗುತ್ತದೆ. ಆದ್ದರಿಂದ ರಕ್ತದಾನದಲ್ಲಿ ಯುವಜನತೆ ಮುಖ್ಯ ಪಾತ್ರ ನಿಭಾಯಿಸಬೇಕು ಎಂದು ತಿಳಿಸಿದರು. ಚನ್ನರಾಯಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net