ಹುಬ್ಬಳ್ಳಿ: ಅಖಿಲ ಭಾರತೀಯ ತೇರಾಪಂಥ್ ಯುವಕ ಪರಿಷತ್ ವತಿಯಿಂದ ಇಲ್ಲಿನ ಕಂಚಗಾರ ಗಲ್ಲಿಯ ಮರುಧರ ಸಂಘ ಭವನದ ಮಹಜನವಾಡಿಯಲ್ಲಿ ಅ. 2ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ರಾಷ್ಟ್ರೋತ್ಥಾನ ರಕ್ತ ಕೇಂದ್ರ ಸಾಥ್ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.