ರಕ್ತದಾನಿಗಳ ತ್ಯಾಗ ಮರೆಯಲಾಗದು: ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿಕೆ

03_10_Mdy_07(Blood Camp)
Published on

ಮಂಡ್ಯ: ರಕ್ತದಾನಿಗಳ ತ್ಯಾಗ ಮರೆಯಲಾಗದು. ಇನ್ನೊಂದು ಜೀವ ಉಳಿಸುವ ನಿಟ್ಟಿನಲ್ಲಿ ಸಹಕಾರ ನೀಡುವುದು ದೊಡ್ಡತನ ಎಂದು ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿದರು.
ನಗರದ ಹೊಸಹಳ್ಳಿಯಲ್ಲಿ ಬಿ.ಆರ್.ಆರ್ ಬಾಯ್ಸ ಹೊಸಹಳ್ಳಿ, ನೆಲದನಿ ಬಳಗ ಮಂಗಲ, ಮಿಮ್ಸ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಸ್ವಾತಂತ್ರ್ಯ ಸೇನಾನಿ ಭಗತ್‌ಸಿಂಗ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಅಗತ್ಯಯುಳ್ಳವರಿಗೆ ರಕ್ತ ನೀಡಿ ಜೀವ ಉಳಿಸುವ ಸುಕಾರ್ಯ ನಿರಂತರವಾಗಿ ನಡೆಯುತ್ತಿರಲಿ. ರಕ್ತದಾನ ಶಿಬಿರಗಳಿಂದ ಬಡವರಿಗೆ ಮತ್ತು ಅಗತ್ಯಯುಳ್ಳವರಿಗೆ ತುರ್ತಾಗಿ ರಕ್ತಸೌಲಭ್ಯ ನೀಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಶಂಭು ಸೇವಾ ಟ್ರಸ್ಟ್‌ನ ಬಿ.ಆರ್.ಸುರೇಶ್, ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ, ಕಾರ್ಯದರ್ಶಿ ಸಂತೆಕಸಲಗೆರೆ ಯೋಗೇಶ್, ಹೊಸಹಳ್ಳಿಯ ಅವಿನಾಶ್, ಸುಮಂತ್, ಆನಂದ್, ಗೌತಮ, ರವಿ, ಅನಿಲ್, ರಕ್ತನಿಧಿಕೇಂದ್ರದ ಮಹಮದ್ ರಫೀ, ಮಹದೇವ್, ಜ್ಞಾನರಾಜ್ ಇತರರಿದ್ದರು. ಇದೇ ವೇಳೆ 30 ಯೂನಿಟ್ ರಕ್ತಸಂಗ್ರಹವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net