

ಕಡಬ: ರಕ್ತದಾನ ಎನ್ನುವುದು ಜೀವದಾನಕ್ಕೆ ಸಮನಾದ ಅತ್ಯಂತ ಪುಣ್ಯದ ಕಾರ್ಯ. ರಕ್ತದಾನದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವ ಸಂಟನೆಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಅಭಿಪ್ರಾಯಪಟ್ಟರು.
ಕಡಬದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಸ್ಕೆಎಸ್ಸೆಸೆಫ್ ಕಡಬ ವಲಯ ಮತ್ತು ಕಡಬ ವಲಯ ವಿಖಾಯ ವತಿಯಿಂದ ಎಸ್ಕೆಎಸ್ಎಸ್ಎಫ್ ವಿಖಾಯ ರಕ್ತದಾನ ಬಳಗ ದ.ಕ. ಜಿಲ್ಲೆ (ಈಸ್ಟ್) ಮತ್ತು ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಮಂಗಳೂರು ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರಿನ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ರಕ್ತನಿಧಿ ಕೇಂದ್ರದ ಸಂಯೋಜಕ ಪ್ರವೀಣ್ ಶುಭಹಾರೈಸಿದರು. ಎಸ್ಕೆಎಸ್ಎಸ್ಎಫ್ ಕಡಬ ವಲಯ ಅಧ್ಯಕ್ಷ ಟಿ.ಎಚ್.ಶರೀಫ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಪತ್ರಕರ್ತರ ಸಂ ಅಧ್ಯಕ್ಷ ನಾಗರಾಜ್ ಎನ್.ಕೆ. ಹಾಗೂ ಎಸ್ಕೆಎಸ್ಸೆಸೆಫ್ ವಿಖಾಯ ರಕ್ತದಾನ ಬಳಗದ ಉಸ್ತುವಾರಿ ಇಬ್ರಾಹಿಂ ಕಡವ ಶುಭಹಾರೈಸಿದರು. ವದ.ಕ. ಜಿಲ್ಲಾ ಕಾರ್ಯದರ್ಶಿ ಕಲೀಮುಲ್ಲಾ ಪನ್ಯ, ಆದಂ ಅಡ್ಕಾಡಿ, ಅಬ್ದುಲ್ ರಜಾಕ್ ರಾವುತರ್ ಕೋಡಿಂಬಾಳ ಉಪಸ್ಥಿತರಿದ್ದರು. ವ ಕಡಬ ವಲಯದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಡಬ ಸ್ವಾಗತಿಸಿದರು. ಎಸ್ಕೆಎಸ್ಎಸ್ಎಫ್ ದ.ಕ.ಜಿಲ್ಲಾ ಚೇರ್ಮನ್ ಅಶ್ರಫ್ ಶೇಡಿಗುಂಡಿ ನಿರೂಪಿಸಿದರು.