ವರ್ಕಾಡಿ ಮಜೀರ್‌ಪಳ್ಳದಲ್ಲಿ ರಕ್ತದಾನ ಶಿಬಿರ

New Project (3)
Published on

ಮಂಜೇಶ್ವರ: ಯೂತ್ ಕಾಂಗ್ರೆಸ್ ವರ್ಕಾಡಿ ಮಂಡಲ ಸಮಿತಿ ನೇತೃತ್ವದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಯೆನೇಪೋಯ ಆಸ್ಪತ್ರೆ ಸಹಯೋಗದೊಂದಿಗೆ ವರ್ಕಾಡಿ ಮಜೀರ್ ಪಳ್ಳದಲ್ಲಿ ರಕ್ತದಾನ ಶಿಬಿರ ಭಾನುವಾರ ಜರುಗಿತು.

ಜಿಪಂ ಸದಸ್ಯೆ ಕಮಲಾಕ್ಷಿ ಕೆ.ಉದ್ಘಾಟಿಸಿದರು. ಯೂತ್ ಕಾಂಗ್ರೆಸ್ ವರ್ಕಾಡಿ ಮಂಡಲ ಸಮಿತಿ ಅಧ್ಯಕ್ಷೆ ಶರ್ಮಿಳಾ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಯೂತ್ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ, ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಅರಿಬೈಲು, ಪ್ರಮುಖರಾದ ನವಾಜ್ ನರಿಂಗಾನ, ಹನೀಫ್ ಎಚ್.ಎ., ಮೊಹಮ್ಮದ್ ಮಜಾಲ್, ಎಸ್.ಅಬ್ದುಲ್ ಖಾದರ್, ಬಿ.ಕೆ. ಮೊಹಮ್ಮದ್, ವಿಕ್ಟರ್ ವೇಗಸ್, ಫ್ರಾನ್ಸಿಸ್ ಡಿಸೋಜ, ರಝಾಕ್, ಅಬೂಬಕ್ಕರ್, ಕೆ.ಎಚ್.ಅಬೂಬಕ್ಕರ್, ಅಶ್ರಫ್, ವಿನೋದ್ ಕುಮಾರ್, ಸದಾಶಿವ ಕೆ., ಅಲಿ, ಇಮ್ತಿಯಾಜ್ ಅಹ್ಮದ್, ವಸಂತರಾಜ ಶೆಟ್ಟಿ, ಎ.ಎಂ.ಉಮರ್ ಕುಂಞ, ಹಮೀದ್, ರಾಬಿಯಾ, ವೇದಾ, ಸಿದ್ದೀಕ್, ಅಝೀಝ್, ಅಬೂಸಾಲಿ ಮತ್ತಿತರರಿದ್ದರು. ಹರ್ಷಾದ್ ವರ್ಕಾಡಿ ಪ್ರಸ್ತಾವನೆಗೈದರು. ಹಮೀದ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net