ಕೊಡಗು ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ ತೀವ್ರ

blood bank
Published on

ಮಡಿಕೇರಿ:

ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಗೆ (ಜಿಲ್ಲಾಸ್ಪತ್ರೆ) ಚಿಕಿತ್ಸೆಗಾಗಿ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ನೇರ ಪರಿಣಾಮ ಇಲ್ಲಿಯ ರಕ್ತನಿಧಿ ಕೇಂದ್ರದ ಮೇಲೆ ಆಗುತ್ತಿದೆ. ಹಾಗಾಗಿ ದಿನ ಕಳೆದಂತೆ ನಿರಂತರವಾಗಿ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಆಗಿಂದ್ದಾಗ್ಗೆ ರಕ್ತಕ್ಕೆ ತೀವ್ರ ಕೊರತೆ ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ರಕ್ತದ ಬೇಡಿಕೆಗೆ ಅನುಗುಣವಾಗಿ ರಕ್ತದಾನಿಗಳ ಸಂಖ್ಯೆ ಹಾಗೂ ರಕ್ತದಾನದ ಶಿಬಿರಗಳ ಸಂಖ್ಯೆ ಏರಿಕೆಯಾಗುತ್ತಿಲ್ಲ. ಒಂದು ಶಿಬಿರದಲ್ಲಿ ಕನಿಷ್ಠ 50 ಯೂನಿಟ್ ರಕ್ತ ಸಂಗ್ರಹವಾದರೆ ಇಂತಹ ಕನಿಷ್ಠ 10 ಶಿಬಿರಗಳಾದರೂ ತಿಂಗಳಿಗೆ ನಡೆಯಬೇಕು. ಆದರೆ ಈಗ ಮಳೆಗಾಲ ಆಗಿರುವುದರಿಂದ ಅಷ್ಟು ಶಿಬಿರಗಳು ಆಯೋಜನೆ ಆಗುತ್ತಿಲ್ಲ. ಒಂದು ವೇಳೆ ಶಿಬಿರಗಳು ನಡೆದರೂ 50 ಯೂನಿಟ್‌ನಷ್ಟು ಸಂಗ್ರಹವಾಗುವ ರಕ್ತ ದಾನದ ಶಿಬಿರಗಳ ಸಂಖ್ಯೆ ತೀರಾ ವಿರಳ ಎನ್ನುತ್ತಾರೆ ರಕ್ತ ನಿಧಿ ಕೇಂದ್ರದ ಅಧಿಕಾರಿಗಳು.

ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯ (ಜಿಲ್ಲಾಸ್ಪತ್ರೆ) ಹಳೆಯ ಕಟ್ಟಡದಲ್ಲಿ ರಕ್ತನಿಧಿ ಕೇಂದ್ರವೊAದಿದ್ದು, ಜಿಲ್ಲೆಯ ಏಕಮಾತ್ರ ರಕ್ತನಿಧಿ ಕೇಂದ್ರ ಇದೊಂದೇ ಆಗಿದೆ. ಇದನ್ನು ಹೊರತುಪಡಿಸಿದರೆ ಬೇರೆ ಜಿಲ್ಲೆಗಳಲ್ಲಿ ಇರುವಂತೆ ಖಾಸಗಿ ಕೇಂದ್ರಗಳಾಗಲಿ, ಸರ್ಕಾರಿ ಕೇಂದ್ರಗಳಾಗಲಿ ಇಲ್ಲ. ಇದರಿಂದಾಗಿ ಈ ಕೇಂದ್ರದ ಮೇಲೆ ಹೆಚ್ಚಿನ ಒತ್ತಡ ಇದೆ.

ಗೋಣಿಕೊಪ್ಪಲು, ವಿರಾಜಪೇಟೆ, ಕುಶಾಲನಗರ, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ ಇಲ್ಲಿ ರಕ್ತದಾನ ಮಾಡಲು ಸಾಧ್ಯವಿಲ್ಲ. ಕೇವಲ ಮಡಿಕೇರಿಯ ರಕ್ತನಿಧಿ ಕೇಂದ್ರದಿAದ ತೆಗೆದುಕೊಂಡು ಬಂದ ರಕ್ತವನ್ನು ಮಾತ್ರ ಸಂಗ್ರಹಿಸಿಟ್ಟುಕೊAಡು, ತುರ್ತು ಸ್ಥಿತಿಯಲ್ಲಿ ಬಳಕೆ ಮಾಡಬಹುದಾಗಿದೆ.

ಕಳೆದ 2 ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ರಕ್ತಕ್ಕೆ ತೀವ್ರತರವಾದ ಕೊರತೆ ಎದುರಾಗಿತ್ತು. ತುರ್ತು ಸ್ಥಿತಿಯಲ್ಲಿ ದಾಖಲಾದ ರೋಗಿಗಳಿಗೆ ರಕ್ತ ನೀಡಲು ರಕ್ತನಿಧಿ ಕೇಂದ್ರದ ಸಿಬ್ಬಂದಿ ಪರದಾಡುವಂತಾಗಿದೆ. ರಕ್ತನಿಧಿ ಕೇಂದ್ರದಲ್ಲಿ ಕನಿಷ್ಠ ಎಂದರೂ 100–150 ಯೂನಿಟ್ ರಕ್ತದ ದಾಸ್ತಾನು ಇರಬೇಕಿದೆ. ಈ ರಕ್ತ ತುರ್ತು ಸ್ಥಿತಿಯಲ್ಲಿ ಬೇಕಾಗುತ್ತದೆ. ಆದರೆ, ಕಳೆದ 2 ತಿಂಗಳುಗಳಲ್ಲಿ ಕೇವಲ 1 ಅಥವಾ 2ಯೂನಿಟ್‌ಗೆ ಇಳಿದಿತ್ತು. ಇಂಥ ಸಂದರ್ಭದಲ್ಲಿ ರಕ್ತನಿಧಿ ಕೇಂದ್ರದಿAದ ನಿತ್ಯವೂ ರಕ್ತದಾನಿಗಳಿಗೆ ಕರೆ ಮಾಡಿ ಅವರನ್ನು ಕರೆಸಿ ರಕ್ತ ಪಡೆದು ರೋಗಿಗಳಿಗೆ ಕೊಡುವ ವ್ಯವಸ್ಥೆ ಮಾಡಲಾಗಿತ್ತು. ರೋಗಿಗಳ ಕಡೆಯವರಿಗೂ ಯಾರಿಂದಲಾದರೂ ರಕ್ತ ಕೊಡಿಸುವಂತೆ ಹೇಳಲಾಗುತ್ತಿತ್ತು. ಈಗಲೂ ಪರಿಸ್ಥಿತಿ ಸಂಪೂರ್ಣ ಸುಧಾರಿಸಿಲ್ಲ ಎನ್ನುತ್ತಾರೆ ರಕ್ತ ನಿಧಿ ಕೇಂದ್ರದ ವೈದ್ಯರು

ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧಕ ಆಸ್ಪತ್ರೆಗೆ (ಜಿಲ್ಲಾಸ್ಪತ್ರೆ) ಕೇವಲ ಕೊಡಗು ಮಾತ್ರವಲ್ಲದೆ ಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ವ್ಯಾಪ್ತಿಯಿಂದಲೂ ರೋಗಿಗಳು ಬರುತ್ತಿದ್ದಾರೆ. ಗರ್ಭಿಣಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಜಿಲ್ಲೆಗಳಿಂದ ದಾಖಲಾಗುತ್ತಿದ್ದಾರೆ. ಇದರೊಂದಿಗೆ ಸಿಕ್ಕಲ್‌ಸೆಲ್ ಅನಿಮೀಯಾ, ತಲಸ್ಸೆಮಿಯಾ ಹಾಗೂ ಇನ್ನಿತರ ಕಾಯಿಲೆಗಳಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೂ ನಿಯಮಿತವಾಗಿ ರಕ್ತ ನೀಡಬೇಕಿದೆ. ಹೀಗಾಗಿ, ರಕ್ತಕ್ಕೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ರಕ್ತದಾನ ಶಿಬಿರಕ್ಕೆ ನೋಂದಣಿಯಾದವರೆಲ್ಲ ಅಥವಾ ರಕ್ತ ನೀಡಲು ಬಂದವರೆಲ್ಲರ ರಕ್ತವೂ ಸ್ವೀಕೃತವಾಗುತ್ತಿಲ್ಲ. ವಿವಿಧ ಕಾರಣಗಳಿಗೆ ರಕ್ತವನ್ನು ತಿರಸ್ಕರಿಸಬೇಕಾಗಿದೆ. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳದೇ ದುಶ್ಚಟಗಳನ್ನು ಹೊಂದಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ವೈದ್ಯರು. ರಕ್ತನಿಧಿ ಕೇಂದ್ರದಿAದ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ರಕ್ತ ನೀಡಿದರೆ, ಎಪಿಎಲ್ ಪಡಿತರ ಚೀಟಿ ಹೊಂದಿರುವವರು ಯೂನಿಟ್‌ಗೆ 1,100 ರೂ. ಶುಲ್ಕ ಪಾವತಿಸಿ ತೆಗೆದುಕೊಳ್ಳಬೇಕಿದೆ.

ಕಳೆದ 2 ವರ್ಷಗಳ ಹಿಂದೆ ತಿಂಗಳಿಗೆ 100ರಿಂದ 150 ಯೂನಿಟ್ ರಕ್ತ ಸಾಕಾಗುತ್ತಿತ್ತು. ಆದರೆ, ಈಗ ತಿಂಗಳಿಗೆ ಕನಿಷ್ಠ ಎಂದರೂ 500 ಯೂನಿಟ್ ರಕ್ತ ಬೇಕಿದೆ. ಆದರೆ, ರಕ್ತದಾನಿಗಳು ಹಾಗೂ ರಕ್ತದಾನದ ಶಿಬಿರಗಳ ಸಂಖ್ಯೆ ಈ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ. ತಿಂಗಳಿಗೆ ಕನಿಷ್ಠ 10 ರಕ್ತದಾನ ಶಿಬಿರಗಳಾದರೂ ನಡೆದರೆ ಬೇಡಿಕೆ ಪೂರೈಸಲು ಸಾಧ್ಯವಾಗುತ್ತದೆ.

ಡಾ. ಕೆ.ಪಿ. ಕರುಂಬಯ್ಯ, ಮುಖ್ಯ ವೈದ್ಯಾಧಿಕಾರಿ, ರಕ್ತನಿಧಿ ಕೇಂದ್ರ, ಮಡಿಕೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net