ರಕ್ತದಾನ,  ನೇತ್ರ ತಪಾಸಣೆ ಶಿಬಿರ

Published on

ಹುಬ್ಬಳ್ಳಿ: ಇಲ್ಲಿಯ ಹಿರೇಪೇಟ, ಭೂಸಪೇಟ, ಕಂಚಗಾರ ಗಲ್ಲಿಯ ಶ್ರೀ ಗಣೇಶ ಉತ್ಸವ ಮಂಡಳಿ ವತಿಯಿಂದ 52ನೇ ವರ್ಷದ ಗಣೇಶ ಉತ್ಸವ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣು ತಪಾಸಣೆ ಶಿಬಿರವನ್ನು ಆ. 31ರಂದು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 10ರಿಂದ ಶಿಬಿರ ನಡೆಯಲಿದೆ. ವೇದಾಂತ ಆಪ್ಟಿಕಲ್ಸ್ ಸಹಯೋಗದೊಂದಿಗೆ ಸೆ. 1ರಿಂದ ಸೆ. 5-ರ ವರೆಗೆ ನಿತ್ಯ ಸಂಜೆ 6ಕ್ಕೆ 75 ಜನರಿಗೆ ಉಚಿತವಾಗಿ ಕಣ್ಣು ತಪಾಸಣೆ ಹಾಗೂ ಉಚಿತ ಕನ್ನಡಕ ನೀಡಲಾಗುವುದು ಎಂದು ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಸವಣೂರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net