ಕೊಳ್ಳೇಗಾಲದಲ್ಲಿ 15 ಜನರಿಂದ ರಕ್ತದಾನ

14-kollegalphoto-2,,,
Published on

ಕೊಳ್ಳೇಗಾಲ : ಪಟ್ಟಣದ ಎಸ್‌ಡಿಎ ಚರ್ಚ್‌ನಲ್ಲಿ ಗ್ಲೋಬಲ್ ಯೂತ್ಸ್ ಡೇ ಅಂಗವಾಗಿ ರಕ್ತದಾನ ಶಿಬಿರವನ್ನು ಶುಕ್ರವಾರ ಆಯೋ ಜಿಸಲಾಗಿತ್ತು. ಮೈಸೂರು ಪ್ರಾಂತ್ಯದ ಎಸ್‌ಡಿಎ ಸಂಸ್ಥೆ ಅಧ್ಯಕ್ಷ ಮುರಳಿಕೃಷ್ಣ ಮಾತನಾಡಿ, ರಾಷ್ಟ್ರಾದ್ಯಂತ 228 ದೇಶಗಳಲ್ಲಿ ನಮ್ಮ ಸಂಸ್ಥೆ ಯೂತ್ ಡೇ ಅಂಗವಾಗಿ ಸಮೀಪದ ಗ್ರಾಮಗಳಿಗೆ ತೆರಳಿ ರಕ್ತದಾನ ಶಿಬಿರ,ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳುವ ಮೂಲಕ ಸೇವಾಕಾರ್ಯ ಮಾಡುತ್ತಿವೆ ಎಂದರು. ಕೆಲ ಹಳ್ಳಿಗಳನ್ನು ದತ್ತು ಪಡೆದು ಅಲ್ಲಿ ಸ್ವಚ್ಛತಾ ಕಾರ್ಯಕ್ರಮ ರೂಪಿಸುವುದು. ಸಮಾಜದ ಅಭಿವೃದ್ಧಿಗಾಗಿ ಹಲವು ಸೇವಾ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಸೇವಾ ಕಾರ್ಯ ಮಾಡುತ್ತಿದೆ ಎಂದರು. 15 ಜನರು ರಕ್ತದಾನ ಮಾಡಿದರು.

ಸಂಸ್ಥೆಯ ಮೈಸೂರು ಪ್ರಾಂತ್ಯದ ಕಾರ್ಯದರ್ಶಿ ಶೇಖರ್, ಪ್ರಾಂಶುಪಾಲ ಕಿರಣ್, ಮುಖ್ಯ ಶಿಕ್ಷಕ ರಾಖೇಶ್, ಡಾ.ರಶ್ಮಿ, ರಕ್ತನಿಧಿ ಸಿಬ್ಬಂದಿ ಸತ್ಯ, ಆಯೋಜಕರಾದ ಸೋಮಣ್ಣ, ನಿರಂಜನ್, ಜ್ಯೋತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net