

ಗದಗ : ರಕ್ತದಾನವು ಶ್ರೇಷ್ಠದಾನವಾಗಿದ್ದು ಇದರಿಂದ ಮನುಷ್ಯನ ಜೀವವು ರಕ್ಷಣೆಯಾಗುವುದರಿಂದ ರಕ್ತದಾನಿಗಳನ್ನು ಜೀವರಕ್ಷಕರು ಎಂದು ಕರೆಯಬಹುದು. ಎಂದು ರೋಟರಿ ಗದಗ ಸೆಂಟ್ರಲ್‌ನ ಅಧ್ಯಕ್ಷರಾದ ವಿಜಯಕುಮಾರ ಹಿರೇಮಠ ಹೇಳಿದರು.
ನಗರದ ಪ್ರತಿಷ್ಠಿತ ಮದರ್ ಥೆರೇಸಾ ಸ್ಕೂಲ್ ಆಫ್ ನರ್ಸಿಂಗ್‌ನಲ್ಲಿ ರೋಟರಿ ಗದಗ ಸೆಂಟ್ರಲ್ ಮತ್ತು ಮದರ್ ಥೆರೇಸಾ ಸ್ಕೂಲ್ ಆಫ್ ನರ್ಸಿಂಗ್ ಅಂಬಿಕಾ ರಕ್ತ ಭಂಡಾರ, ಗದಗ ಇವರ ಸಹಯೋಗದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ರಕ್ತಗುಂಪು ತಪಾಸಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ರೋಟರಿ ಗದಗ ಸೆಂಟ್ರಲ್‌ನ ಕಾರ್ಯದರ್ಶಿಗಳಾದ ಡಾ.ಸಂತೋಷ ತೋಟಗಂಟಿಮಠ ಮಾತನಾಡುತ್ತ ರಕ್ತದಾನದ ಮಹತ್ವವನ್ನು ಇಂದಿನ ಯುವಪೀಳಿಗೆಗೆ ತಿಳಿಸಿಕೊಡುವುದರೊಂದಿಗೆ ರಕ್ತದಾನ ಮಾಡುವುದರಿಂದ ನಮ್ಮ ಶರೀರಕ್ಕೆ ಆಗುವ ಆರೋಗ್ಯ ಲಾಭಗಳನ್ನು ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಸಮಾಜಕ್ಕೆ ತಿಳಿಸಿಕೊಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸುಮಾರು ೩೦ ವಿದ್ಯಾರ್ಥಿಗಳು ಸ್ವೆಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡಿದರು. ಇದೇ ಸಂದರ್ಭದಲ್ಲಿ ಸುಮಾರು ೬೯ ವಿದ್ಯಾರ್ಥಿಗಳಿಗೆ ಉಚಿತ ರಕ್ತಗುಂಪು ತಪಾಸಣೆಯನ್ನು ಸಮಾಜ ಸೇವಕರಾದ ಡಾ. ದತ್ತು ವೈಕುಂಟೆಯವರು ಮಾಡಿದರು.
ಕಾರ್ಯಕ್ರಮದಲ್ಲಿ ರೋಟರಿ ಗದಗ ಸೆಂಟ್ರಲ್‌ನ ಹಿರಿಯ ಸದಸ್ಯರಾದ ವ್ಹಿ.ಕೆ.ಗುರುಮಠ, ರಾಜೀವ ಶೆಟ್ಟಿ, ಮುರಗೇಶ ಬಡ್ನಿ, ಖಜಾಂಚಿ ಶ್ರೀ ಸುನಿಲ್ ಕಬಾಡಿ ಅಸಿಸ್ಟಂಟ್ ಗವರ್ನರ್, ಶರಣಬಸಪ್ಪ ಗುಡಿಮನಿ ಹಾಗೂ ಸಂದೀಪ ಕಾಂಬಳೆ, ಶ್ವೇತಾ ಕಬಾಡಿ, ಸುನೀಲ ಉಕುಮನಾಳ, ಕ್ಲಬ್‌ನ ಸರ್ವಸದಸ್ಯರು ಅಂಬಿಕಾ ರಕ್ತ ಭಂಡಾರದ ವೈದ್ಯಕೀಯ ಅಧಿಕಾರಿಗಳಾದ ಡಾ.ಅನಂತ ಶಿವಪೂರ, ರಕ್ತ ಭಂಡಾರದ ವ್ಯವಸ್ಥಾಪಕರಾದ ರೋಹಿತ ಚವ್ಹಾಣ, ಕಾಲೇಜಿನ ನಿರ್ದೇಶಕರಾದ ಆನಂದ ತೋಟಗಂಟಿಮಠ, ಪ್ರಾಚಾರ್ಯರಾದ ಶಿವಕುಮಾರ ಕಾತರಕಿ, ವಿನಯ ಕುಪ್ಪಸ್ತ, ಸರ್ವ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ಪ್ರೊ. ರೋ. ಕುಮಾರ ಒಡೆಯರ ತಿಳಿಸಿದ್ದಾರೆ.