ರಾಜ್ಯಪಾಲರ ನಡೆ ಖಂಡಿಸಿ ಹೆದ್ದಾರಿ ತಡೆ

Blocked the highway to condemn the Governor's move
ರಾಜ್ಯಪಾಲರ ನಡೆ ಖಂಡಿಸಿ ಕೆರೂರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಯಕ್ಕಪ್ಪನವರ ಮಾತನಾಡಿದರು. ಹೊಳಬಸು ಶೆಟ್ಟರ್, ಎಂ.ಬಿ. ಹಂಗರಗಿ, ಪಿ.ಆರ್. ಗೌಡರ್, ಶಶಿ ಉದಗಟ್ಟಿ, ರಾಜಮಹಮ್ಮದ್ ಬಾಗವಾನ ಇತರರಿದ್ದರು.
Published on

ಕುಳಗೇರಿ ಕ್ರಾಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಸಹಿಸದ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ರಾಜ್ಯಪಾಲರು ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಸಿಎಂ ಅಭಿಮಾನಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ಹಲವಾರು ಪ್ರತಿಭಟನಾಕಾರರು ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ತೆರಳಿ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.

ನೇತೃತ್ವ ವಹಿಸಿದ್ದ ಹೊಳಬಸು ಶೆಟ್ಟರ್ ಮಾತನಾಡಿ, ಕೂಡಲೇ ಆದೇಶ ಹಿಂಪಡೆಯದಿದ್ದರೆ ಜಿಲ್ಲಾಮಟ್ಟದಲ್ಲಿ ನಾಳೆಯೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಯಕ್ಕಪ್ಪನವರ, ಎಂ.ಬಿ. ಹಂಗರಗಿ, ಪಿ.ಆರ್. ಗೌಡರ್, ಶಶಿ ಉದಗಟ್ಟಿ, ರಾಜಮಹಮ್ಮದ್ ಬಾಗವಾನ, ಮದು ಯಡ್ರಾಮಿ, ಮುತ್ತಪ್ಪ ಗಾಜಿ, ಬಸವರಾಜ ಬ್ಯಾಹಟ್ಟಿ, ಹನುಮಂತ ಹುಡೇದಮನಿ, ಶಿವನಗೌಡ ಪಾಟೀಲ, ಬಸು ಕಟ್ಟಿಕಾರ, ಮುದಕಣ್ಣ ಹೆರಕಲ್, ಸಕ್ರಪ್ಪ ಕಲ್ಲಾಪೂರ, ಬಸವರಾಜ ಹುಣಸಿಕಟ್ಟಿ, ಹನುಮಂತ ಕರಲಿಂಗನ್ನವರ, ರವಿ ಹೆರಕಲ್, ಮಂಜು ಹೊರಕೇರಿ, ಕರಿಗೌಡ ಮುಷ್ಠಿಗೇರಿ, ಲಕ್ಷ್ಮಣ ಚಿಮ್ಮನಕಟ್ಟಿ, ಸಿದ್ದಪ್ಪ ದೇವರಮನಿ, ಈರನಗೌಡ ಭರಮಗೌಡ್ರ, ಕಾಕನಗೌಡ ಮುದಿಗೌಡ್ರ, ಡಿ.ಎನ್. ಪಾಟೀಲ, ರಂಗು ಗೌಡರ್, ಸಿದ್ದು ಗೌಡರ್, ಶಿವು ಮಣ್ಣೂರ, ಚಂದ್ರಶೇಖರ ಚಿಂತಾಕಲ್, ಸಿದ್ಧಪ್ಪ ಉದ್ದನ್ನವರ ಇತರರಿದ್ದರು.

ಹೆದ್ದಾರಿ ತಡೆಯಿಂದಾಗಿ ಅಂದಾಜು ಎರಡು ಗಂಟೆಗಳವರೆಗೆ ಟ್ರಾಫಿಕ್ ಜಾಮ್‌ನಿಂದ ಪ್ರಯಾಣಿಕರು ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net