ಇಷ್ಟಲಿಂಗ ಪೂಜೆಯಿಂದ ಆನಂದ ಪ್ರಾಪ್ತಿ

RAMBAPURI SHREE
Published on

ನರೇಗಲ್ಲ: ಆಧ್ಯಾತ್ಮಿಕ ಕ್ಷೇತ್ರ ತಿಳಿಯುವುದು, ಆಚರಣೆ ಪಾಲನೆ ಸುಲಭದ ಕೆಲಸವಲ್ಲ. ಇಷ್ಟಲಿಂಗ ಮಹಾಪೂಜೆ ನಮಗೆ ಇನ್ನಿಲ್ಲದ ಆನಂದ ನೀಡುತ್ತದೆ. ಅಂತರಂಗದಲ್ಲಿ ಮಾಡುವ ಈ ಪೂಜೆಯನ್ನು ಲೋಕಾಂತರಗೊಳಿಸಿದವರು ರಂಭಾಪುರಿ ಪೀಠದ ಹಿಂದಿನ ಜಗದ್ಗುರು ಶ್ರೀ ಗಂಗಾಧರ ಮಹಾಸ್ವಾಮಿಗಳು. ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಾಡಿದ ಕಾರ್ಯ ಅನನ್ಯವಾದುದು ಎಂದು ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಅಬ್ಬಿಗೇರಿ ಹೊಸ ಹಿರೇಮಠದಲ್ಲಿ ಶನಿವಾರ ಇಷ್ಟಲಿಂಗ ಮಹಾಪೂಜೆ ಬಳಿಕ ಶ್ರೀಗಳು ಆಶೀರ್ವಚನ ನೀಡಿದರು. ಲಿಂಗ ರೂಪದಲ್ಲಿರುವ ಶಿವನ ಪೂಜೆ ಮಾಡುವುದರಿಂದ ಮನಸಿಗೆ ಆನಂದ ಸಿಗುತ್ತದೆ. ಒಂದು ಸಂದರ್ಭದಲ್ಲಿ ಬ್ರಹ್ಮ ಶಿವನ ಮುಕುಟವನ್ನು, ವಿಷ್ಣು ಶಿವನ ಪಾದವನ್ನು ಕಾಣಲು ಹೋಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಅದರಲ್ಲಿ ವಿಷ್ಣು ಅಲ್ಪ ಪ್ರಮಾಣದ ಯಶ ಕಂಡರೂ ಬ್ರಹ್ಮ ಸುಳ್ಳು ಹೇಳಿದ್ದರಿಂದ ಅವನಿಗೆ ಶಿವ ಶಾಪ ಕೊಟ್ಟನು. ಶಿವನ ಶಾಪದಿಂದಲೇ ನಾವು ಎಲ್ಲಿಯೂ ಬ್ರಹ್ಮ ದೇವರ ದೇವಸ್ಥಾನಗಳನ್ನು ಕಾಣುವುದಿಲ್ಲ ಎಂದರು.

ಶ್ರೀ ವೀರಭದ್ರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ರೇಣುಕ ಸ್ವಾಮೀಜಿ, ಡಾ. ನಾಗಭೂಷಣ ಶ್ರೀ, ನಾಗವಂದ ಶ್ರೀ, ಗುರುಲಿಂಗ ಸ್ವಾಮೀಜಿ, ಶಾಸಕ ಜಿ.ಎಸ್. ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net