ಇಂಗ್ಲಿಷ್ ವ್ಯಾಮೋಹವೆಂಬ ಪೂತನಿಯ ಬಗ್ಗೆ ಎಚ್ಚರವಿರಲಿ ಎಂದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ

85th_Saahithya_Sammelana C T Ravi
Published on

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ): ಕೃಷ್ಣನನ್ನು ಕೊಲ್ಲಲು ಪೂತನಿ ಬಂದಂತೆ, ಇಂದು ಇಂಗ್ಲಿಷ್ ವ್ಯಾಮೋಹವೆಂಬ ಪೂತನಿ ನಮ್ಮ ಭಾಷೆ, ಸಂಸ್ಕೃತಿ ಕೊಲ್ಲಲು ಬಂದಿದೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಅವರು ಹೇಳಿದರು.

ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವ್ಯಾಮೋಹದ ಪೂತನಿ‌ ನಮ್ಮ‌ ಮನೆ ಹಾಗೂ ಮನವನ್ನು ಆವರಿಸಿದೆ. ಇದನ್ನು ಮುಗಿಸಲು ಒಬ್ಬ ಕೃಷ್ಣ ಸಾಕಾಗಲ್ಲ. ಎಲ್ಲರೂ ಒಗ್ಗೂಡಿ ಕನ್ನಡ ತೇರನೆಳೆಯೋಣ ಎನ್ನುವ ಸಂಕಲ್ಪದೊಂದಿಗೆ ಇಲ್ಲಿಂದ ತೆರಳಿದರೆ ಸಾಧ್ಯವಿದೆ ಎಂದರು.

ಚೀನಾ, ಜರ್ಮನಿ, ರಷ್ಯಾ ದೇಶಗಳಲ್ಲಿ ಇಂಗ್ಲಿಷ ಭಾಷೆಯೇ ಇಲ್ಲ. ಹಾಗಾದರೆ ಅವರು ಮುಂದುವರೆದಿಲ್ಲವೇ? ಇಂಗ್ಲಿಷ ಅನ್ನ ಕೊಡುವ ಭಾಷೆ ಎಂಬುದು ಬರೀ ಭ್ರಮೆ ಎಂದು ವ್ಯಾಖ್ಯಾನಿಸಿದರು.

ಕನ್ನಡ ಭಾಷೆಯ ಬಗ್ಗೆ ಕನ್ನಡಿಗರಾದ ನಮಗೆ ಯಾವುದೇ ರೀತಿಯ ಕೀಳರಿಮೆ ಬೇಡವೇ ಬೇಡ. ಕನ್ನಡ ಭಾಷೆಯನ್ನು ಕಳೆದುಕೊಂಡರೆ ನಮ್ಮ ಸಂಸ್ಕೃತಿಯನ್ನು ಕಳೆದುಕೊಂಡಂತೆ

ರೈತ ಅಸಹಕಾರ ಚಳುವಳಿ ಮಾಡಿದರೆ ಯಾವ ಭಾಷೆ, ಯಾವ ಕಂಪ್ಯೂಟರ್ ಸಹ ಅನ್ನ ಕೊಡಲ್ಲ ಎಂದ ಅವರು ರೈತನೇ ನಮಗೆ ಅನ್ನದಾತ. ಈ ನೆಲವೇ, ಈ ಕನ್ನಡ ನುಡಿಯೇ ನಮಗೆ ಜೀವ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net