ಸಾಮೂಹಿಕ ವಿವಾಹ ಬಡವರಿಗೆ ವರದಾನ

16 NRL 4
Published on

ನರೇಗಲ್ಲ: ಸಾಮೂಹಿಕ ಮದುವೆ ಬಡವರ ಮದುವೆಯಲ್ಲ. ಅದು ಭಾಗ್ಯವಂತರ ಮದುವೆ. ವೀರಭದ್ರೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಶ್ಲಾಘನೀಯ ಎಂದು ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸ್ಥಳೀಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಜರುಗಿದ 2 ಜೋಡಿ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸ್ವಾರ್ಥಪರ ಚಿಂತನೆಗಳನ್ನು ಕೈಬಿಟ್ಟು, ಪರೋಪಕಾರ ಮೈಗೂಡಿಸಿಕೊಳ್ಳಬೇಕು. ನಾವು, ನಮ್ಮ ಕುಟುಂಬವಷ್ಟೇ ಚೆನ್ನಾಗಿದ್ದರೆ ಸಾಲದು, ನಮ್ಮ ಸುತ್ತಲಿನವರು ಸಂತೋಷವಾಗಿ ಇರಬೇಕು. ಆಗಮಾತ್ರ ಸಂತೋಷದಿಂದ ಇರಲು ಸಾಧ್ಯ. ದ್ವೇಷ, ಅಸೂಯೆಪಡದೆ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಅವುಗಳನ್ನು ಮಕ್ಕಳಿಗೂ ಬಾಲ್ಯದಿಂದಲೇ ಕಲಿಸಬೇಕು. ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿದೆ ಎಂದರು.

ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹ ಬಡವರ ಪಾಲಿಗೆ ಸಂಜೀವಿನಿಯಾಗಿದೆ. ಏಕತೆ ಮತ್ತು ಸಾಮರಸ್ಯದಿಂದ ಬಾಳುವಲ್ಲಿ ಸಾಮೂಹಿಕ ವಿವಾಹಗಳು ಸಹಕಾರಿಯಾಗಲಿವೆ ಎಂದರು.

ದರ್ಗಾದ ಹಜರತ್ ಮಂಜೂರ ಹುಸೇನ್ ಶ್ಯಾವಲಿ ಶರಣರು, ಶಿವಪ್ಪ ಕೋರಿ, ಬಸಪ್ಪ ಲಕ್ಕನಗೌಡ್ರ, ಮಲ್ಲಿಕಾರ್ಜುನ ಜುಟ್ಲ, ಬಾಳಪ್ಪ ಕಳಕಣ್ಣವರ, ಶಿವಪ್ಪ ಧರ್ಮಾಯತ, ಶರಣಪ್ಪ ಸೊಮಗೊಂಡ, ಶರಣಪ್ಪ ಗಂಗರಗೊಂಡ, ಶೇಖಪ್ಪ ಲಕ್ಕನಗೌಡ್ರ, ಆನಂದ ಕಳಕಣ್ಣವರ, ಕಳಕಪ್ಪ ಹತ್ತಿಕಟಗಿ, ಸುನೀಲ ಅಂಬೇಕರ, ಪ್ರಕಾಶ ಪಿಡಗೊಂಡ, ಬಸವರಾಜ ಗಂಗರಗೊಂಡ, ನಿಂಗನಗೌಡ ಲಕ್ಕನಗೌಡ್ರ, ವೀರಯ್ಯ ಸಂಶಿಮಠ, ಜಗದೀಶ ಹೊನವಾಡ, ಶರಣಯ್ಯ ಸಂಶಿಮಠ, ಶರಣಪ್ಪ ಮಳ್ಳಿ, ಗ್ವಾಲಪ್ಪ ಮಳ್ಳಿ, ಶಿವಪ್ಪ ಲಕ್ಕನಗೌಡ್ರ, ಶೇಖರಗೌಡ ಪಾಟೀಲ, ಶಶಿಧರ ಓದುಸುಮಠ, ನಿಂಗಪ್ಪ ಲಕ್ಕನಗೌಡ್ರ, ವೀರೇಶ ಪಿಡಗೊಂಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net