ಬಗಲಿ ಪೆನಲ್‌ಗೆ ಆಶೀರ್ವದಿಸಿ

Bless the Bagali panel
ಇಂಡಿ ಪಟ್ಟಣದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು.
Published on

ಇಂಡಿ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ 11 ರಂದು ನಡೆಯಲಿರುವ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಿದ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ, ನಾಗನಾಥ ಬಿರಾದಾರ ಹಾಗೂ ಮುತ್ತಪ್ಪ ಪೋತೆ ಅವರಿಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಆಶೀರ್ವದಿಸಬೇಕು ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಜಂಟಿಯಾಗಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಂಡ ಇಂಡಿ ಹಾಗೂ ಸಿಂದಗಿ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಷೇರುದಾರರು ಡಾ. ಸಾರ್ವಭೌಮ ಬಗಲಿ ಅವರ ಬಗ್ಗೆ ಕಾಳಜಿ ತೋರಿದ್ದಾರೆ. ಕಾರ್ಖಾನೆಯಲ್ಲಿ ವಿರೋಧಪಕ್ಷ ಇದ್ದಾಗ ಮಾತ್ರ ಅವ್ಯವಹಾರ ಭ್ರಷ್ಟಾಚಾರ ತಡೆಯಬಹುದಾಗಿದೆ.

ಹೀಗಾಗಿ ಡಾ. ಬಗಲಿ ಹಾಗೂ ಅವರ ಪೆನಲ್ ಸದಸ್ಯರಿಗೆ ಮತದಾನ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅಖಂಡ ಇಂಡಿ ಹಾಗೂ ಸಿಂದಗಿ ತಾಲೂಕಿನ ಷೇರುದಾರರು ಬಗಲಿ ಅವರ ಪೆನಲ್‌ಗೆ ಮತದಾನ ಮಾಡಬೇಕು ಎಂದು ಹೇಳಿದರು.

ಡಾ. ಸಾರ್ವಭೌಮ ಬಗಲಿ ಕಾರ್ಖಾನೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದರೆ ಯಾವುದೇ ಭ್ರಷ್ಟಾಚಾರವಾಗದಂತೆ ತಡೆಯುವ ಶಕ್ತಿ ಹೊಂದಿದ್ದಾರೆ. ರೈತರಿಗೆ ಅನ್ಯಾಯವಾಗುವ ಸಂದರ್ಭ ಬಂದರೆ ಅವರು ಧ್ವನಿ ಎತ್ತುತ್ತಾರೆ.

ಅವರು ಯಾವಾಗಲೂ ರೈತರ ಪರವಾಗಿದ್ದು, ಷೇರುದಾರರು ಬಗಲಿಯವರ ಪೆನಲ್‌ಗೆ ಹೆಚ್ಚಿನ ಮತದಾನ ಮಾಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಶ್ರೀಶೈಲಗೌಡ ಪಾಟೀಲ, ಮಲ್ಲು ಹಾವಿನಾಳಮಠ, ಸಿದ್ದರಾಮ ಹಂಜಗಿ, ಯಶವಂತ ಕಾಡೆ, ಅಶೋಕ ಭೂತಾಳಿ, ಶರಣು ಡಂಗಿ, ರವಿಗೌಡ ಪಾಟೀಲ, ಶಿವುಬಾಳ ಬಾರಿಕಾಯಿ, ಮಹಾದೇವ ಆಳೂರ, ಚಂದ್ರಶೇಖರ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net