ನನ್ನ ಗೆಲುವಿಗೆ ಆಶೀರ್ವದಿಸಿ

Bless my victory
ಕಲಾದಗಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಮುಖಂಡರಾದ ಎಂ.ಬಿ. ಸೌದಾಗರ, ಪಕೀರಪ್ಪ ಮಾದರ ಇತರರಿದ್ದರು.
Published on

ಕಲಾದಗಿ: ನಾನು ಸದಾ ನಿಮ್ಮೊಳಗೊಬ್ಬಳಾಗಿ ಇರುವುದರೊಂದಿಗೆ ಬೀಳಗಿ ಮತಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ. ಪಕ್ಷದ ಈ ಭಾಗದ ಮುಖಂಡರು, ಕಾರ್ಯಕರ್ತರು ನನ್ನ ಗೆಲುವಿಗೆ ಆಶೀರ್ವದಿಸಬೇಕು ಎಂದು ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಮನವಿ ಮಾಡಿದರು.

ಗ್ರಾಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಎಂ.ಬಿ. ಸೌದಾಗರ ಅವರ ಮನೆಗೆ ಭೇಟಿ ನೀಡಿ ಅಲ್ಲಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ನಡೆದುಕೊಂಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಿಂದ ಜನರ ಆಶೀರ್ವಾದ ನಮಗೆ ದೊರೆಯಲಿದೆ. ಇದಕ್ಕೆ ಪೂರಕವಾಗಿ ತಮ್ಮೆಲ್ಲ ಪ್ರಾಮಾಣಿಕ ಶ್ರಮದ ಆವಶ್ಯತೆ ಇದೆ ಎಂದರು.

ಮುಖಂಡರಾದ ಎಂ.ಬಿ. ಸೌದಾಗರ, ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸಂಶಿ ಮಾತನಾಡಿ, ಕಲಾದಗಿ ಜಿಪಂ ಮತಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಎಲ್ಲರೂ ನಿಮ್ಮ ಗೆಲುವಿಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದ ಅವರು, ವೀಣಾ ಕಾಶಪ್ಪನವರ ಅಸಮಾಧಾನ ತೊಡೆದುಹಾಕುವ ಕೆಲಸ ಮಾಡಿ ಎಂದರು.

ಗ್ರಾಪಂ ಅಧ್ಯಕ್ಷೆ ಖಾತುನಬಿ ರೋಣ, ಉಪಾಧ್ಯಕ್ಷ ಪಕೀರಪ್ಪ ಮಾದರ, ಮುಖಂಡರಾದ ಸದುಗೌಡ ಪಾಟೀಲ, ವಿಜುಗೌಡ ಪಾಟೀಲ, ಬಸವರಾಜ ಬಿಲಕೇರಿ, ಎಂ.ಎ. ತೇಲಿ, ನಾಗಪ್ಪ ಗಾಣಿಗೇರ, ಹಸನ್ಮಹದ್ ರೋಣ, ಅಮೀನಸಾಬ ಬೀಳಗಿ, ಚಂದ್ರಲೇಖ ಭಜಂತ್ರಿ, ರಾಜೇಸಾಬ ಗೋಠೆ, ಮಲ್ಲಪ್ಪ ಜಮಖಂಡಿ, ಯಲ್ಲಪ್ಪ ಕುಳಗೇರಿ, ಹನುಮಂತ ಗದ್ದನಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net