ಸುಭದ್ರ ಭಾರತಕ್ಕಾಗಿ ಬಿಜೆಪಿಗೆ ಮತ್ತೊಮ್ಮೆ ಆಶೀರ್ವದಿಸಿರಿ

Bless BJP again for a prosperous India
ಬಾದಾಮಿ ಮತಕ್ಷೇತದ ವಿವಿಧ ಗ್ರಾಮಗಳಲ್ಲಿ ಲೋಕಸಭಾ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಮುಖಂಡರು ಮತಯಾಚನೆ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ,ಮಾಜಿ ಶಾಸಕ ಎಂ.ಕೆ ಪಟ್ಟಣಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಹಿರಿಯರಾದ ಬಿ. ಪಿ. ಹಳ್ಳೂರ ಇತರರಿದ್ದರು.
Published on

ಬಾದಾಮಿ: ದೇಶದ ಭವಿಷ್ಯದ ದೃಷ್ಟಿಯಿಂದ ಆರ್ಥಿಕವಾಗಿ ಸುಭದ್ರ ರಾಷ್ಟ್ರವನ್ನಾಗಿಸಲು ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮನವಿ ಮಾಡಿದರು.

ಬಾದಾಮಿ ಮತಕ್ಷೇತದ ಕೆಲವಡಿ, ತಿಮ್ಮಾಪುರ, ಲಿಂಗಾಪುರ, ಗುಳೇದಗುಡ್ಡ ರೈಲ್ವೆ ಸ್ಟೇಷನ್, ಖಾಜಿ ಬೂದಿಹಾಳ, ಹಿರೇಬೂದಿಹಾಳ, ರಾಘಾಪೂರ, ತೋಗುಣಸಿ, ತೋಗುಣಿಸಿ ತಾಂಡಾ, ಹಂಸನೂರು, ತಗ್ಗಿ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಲೋಕಸಭಾ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಮತಯಾಚನೆ ಮಾಡಿ ಮಾತನಾಡಿದರು.

ಮಾಜಿ ಶಾಸಕ ಎಂ.ಕೆ ಪಟ್ಟಣಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಹಿರಿಯರಾದ ಬಿ. ಪಿ. ಹಳ್ಳೂರ, ಎಫ್. ಆರ್. ಪಾಟೀಲ, ಕುಮಾರಗೌಡ ಜನಾಲಿ, ಬಸವರಾಜ ಪಾಟೀಲ, ಮಂಡಲ ಅಧ್ಯಕ್ಷರಾದ ನಾಗರಾಜ ಕಾಚಟ್ಟಿ, ಜಿಲ್ಲಾ ಕಾರ್ಯದರ್ಶಿ ಮುತ್ತು ಉಳ್ಳಾಗಡ್ಡಿ, ಸಿದ್ದಣ್ಣ ಶಿವನಗುತ್ತಿ, ಭೀಮನಗೌಡ ಪಾಟೀಲ, ಸಂಗಪ್ಪ ಸಾಳಗುಂದಿ, ಆಸಂಗೆಪ್ಪ ನಕ್ಕರಗುಂದಿ, ಪ್ರಮೊದ ಕವಡಿಮಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net