ಹೋಮಿಯೋಪಥಿ ಸಂಶೋಧನೆ ಪರಿಷತ್‌ನೊಂದಿಗೆ ಬಿಎಲ್‌ಡಿಇ ಒಡಂಬಡಿಕೆ

BLDE VS AYUSH DEPT
ವಿಜಯಪುರ ನಗರದ ಬಿಎಲ್ಡಿಇ ಡೀಮ್ಡ್ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿ ಮತ್ತು ಕೇಂದ್ರ ಆಯಷ್ ವಿಭಾಗದ ಹೋಮಿಯೋಪಥಿ ಸಂಶೋಧನೆ ಪರಿಷತ್ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಡಾ. ಆರ್.ಎಸ್. ಮುಧೋಳ, ಡಾ. ಸುಭಾಶ ಕೌಶಿಕ, ಡಾ. ವೈ.ಎಂ. ಜಯರಾಜ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಕೇಂದ್ರ ಆಯುಷ್ ಇಲಾಖೆಯ ಹೋಮಿಯೋಪಥಿ ಸಂಶೋಧನೆ ಪರಿಷತ್ತಿನ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ. ಆರ್.ಎಸ್. ಮುಧೋಳ ಮತ್ತು ಕೇಂದ್ರ ಆಯುಷ ವಿಭಾಗದ ಹೋಮಿಯೋಪಥಿ ಸಂಶೋಧನೆ ಪರಿಷತ್ತಿನ ಮಹಾನಿರ್ದೇಶಕ ಡಾ. ಸುಭಾಶ ಕೌಶಿಕ ಅವರು ಒಡಂಬಡಿಕೆಗೆ ಪರಸ್ಪರ ಸಹಿ ಹಾಕಿದ್ದಾರೆ ಎಂದು ಬಿಎಲ್ಡಿಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ವಿವಿ ರಿಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ ತಿಳಿಸಿದ್ದಾರೆ.

ಈ ಒಡಂಬಡಿಕೆಯಿಂದಾಗಿ ವಿವಿ ಮತ್ತು ಪರಿಷತ್ತಿನ ನಡುವೆ ಪರಸ್ಪರ ಸಹಯೋಗದಲ್ಲಿ ಆರೋಗ್ಯ ವಿಜ್ಞಾನ ಕ್ಷೇತ್ರದ ನಾನಾ ವಿಭಾಗಗಳಲ್ಲಿ ಸಮಗ್ರ ಚಟುವಟಿಕೆ ನಡೆಸಲು ಮತ್ತು ನಾನಾ ಸಾಂಕ್ರಾಮಿಕ ಹಾಗೂ ದೀರ್ಘಕಾಲದ ಕಾಯಿಲೆಗಳನ್ನು ನಿಯಂತ್ರಿಸಲು ಹೊಸ ಸಂಶೋಧನೆ ಕೈಗೊಳ್ಳಲು, ವಿಚಾರ ವಿನಿಮಯ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ವಿವಿ ಸಮಕುಲಾಧಿಪತಿ ಡಾ. ಆರ್. ಎಂ. ಜಯರಾಜ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ವಿವಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ನಿರ್ದೇಶಕ ಡಾ. ಎಂ.ಎಂ.ಪಾಟೀಲ, ಗೌರವಾನ್ವಿತ ಪೀಠದ ಪ್ರಾಧ್ಯಾಪಕ ಡಾ. ಕುಸಾಲ ಕೆ. ದಾಸ, ಕೇಂದ್ರ ಹೋಮಿಯೋಪಥಿ ಸಂಶೋಧನೆ ಪರಿಷತ್ತಿನ ವಿಜ್ಞಾನಿ ಡಾ. ದೇವದತ್ತ ನಾಯಕ, ಅಲೈಡ್ ಹೆಲ್ತ್ ಸಾಯಿನ್ಸ್ ಡೀನ್ ಎಸ್.ವಿ. ಪಾಟೀಲ, ಐಕ್ಯೂಎಸಿ ನಿರ್ದೇಶಕಿ ಡಾ. ಲತಾ ಮುಳ್ಳೂರ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೊಡಲ್ ಅಧಿಕಾರಿ, ಡಾ. ಈಶ್ವರ ಬಾಗೋಜಿ, ಡಾ. ಚಂದ್ರಕಾ ದೊಡ್ಡಿಹಾಳ, ಚಂದ್ರಮೌಳಿ ರೆಡ್ಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net