ಬಿಎಲ್‌ಡಿಇ ಸಂಸ್ಥೆಯಿಂದ ಶ್ರೀಮತಿ ಬಂಗಾರಮ್ಮ ಸಜ್ಜನ ಜನ್ಮ ದಿನ ಆಚರಣೆ

bangaramma sajjjan birth day
ವಿಜಯಪುರ ನಗರದ ಬಿಎಲ್ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಶ್ರೀಮತಿ ಬಂಗಾರಮ್ಮ ಸಜ್ಜನವರ 115 ನೇ ಜನ್ಮ ದಿನ ಆಚರಿಸಲಾಯಿತು. ಡಾ.ಎಂ.ಎಸ್. ಮದಬಾವಿ, ಎಸ್.ಜಿ. ಸಜ್ಜನ, ಡಾ. ವೈ. ತಮ್ಮಣ್ಣ ಇದ್ದಾರೆ.
Published on

ವಿಜಯಪುರ: ನಗರದ ಪ್ರತಿಷ್ಟಿತ ಬಿಎಲ್ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಶ್ರೀಮತಿ ಬಂಗಾರಮ್ಮ ಸಜ್ಜನವರ 115 ನೇ ಜನ್ಮ ದಿನ ಆಚರಿಸಲಾಯಿತು.

ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್. ಮದಬಾವಿ ಉಪನ್ಯಾಸ ನೀಡುತ್ತಾ, ಬಂಗಾರಮ್ಮ ಸಜ್ಜನವರು ವಿದ್ಯಾದಾನ ಪ್ರಸಾರಕ್ಕಾಗಿ ಬಿಎಲ್ಡಿಇ ಸಂಸ್ಥೆಗೆ 54 ಎಕರೆ 16 ಗುಂಟೆ ಜಮೀನು ದಾನವಾಗಿ ನೀಡಿದ್ದು ಇತಿಹಾಸದ ಪುಟಗಳಲ್ಲಿ ಮೈಲಿಗಲ್ಲಾಗಿ ನಿಂತಿದೆ. ಬಿಎಲ್ಡಿಇ ಸಂಸ್ಥೆಯಲ್ಲಿ ಇಂದು ಹಲವಾರು ವಿದ್ಯಾರ್ಥಿಗಳು ಜ್ಞಾನ ಪಡೆಯುತ್ತಿದ್ದಾರೆ. ಇವರ ಜನ್ಮದಿನವನ್ನು ಪರಂಪರೆಯಾಗಿ ಆಚರಿಸದೇ, ಕರ್ತವ್ಯವಾಗಿ ಆಚರಿಸಿ ಎಂದು ಸಲಹೆ ನೀಡಿದರು.

ಎಸ್.ಜಿ. ಸಜ್ಜನ ಅವರು ಮಾತನಾಡುತ್ತಾ, ನಿಸ್ವಾರ್ಥ ಸೇವೆ ಯಾವಾಗಲೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಿತ್ತದೆ. ನಾವು ಗಳಿಸಿದ ಸಂಪತ್ತಲ್ಲಿ ಸ್ವಲ್ಪಮಟ್ಟಿಗೆ ಶಿಕ್ಷಣಕ್ಕಾಗಿ ದಾನ ಮಾಡಬೇಕು. ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರವನ್ನು ಪಡೆಯಬೇಕು ಎಂದರು.

ಪ್ರಾಚಾರ್ಯ ಡಾ. ವೈ. ತಮ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ಡಾ. ಭಕ್ತಿ ಮಹೀಂದ್ರಕರ ಮತ್ತಿತರರಿದ್ದರು.

ದೀಪಾ ಲಗಳಿ ಸ್ವಾಗತಿಸಿದರು. ಮೈಬೂಬಸಾಹೇಬ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net