ನಾಳೆ ಬೆಂಗಳೂರಿನಲ್ಲಿ ಬಿಎಲ್​ಡಿ ಸೌಹಾರ್ದ ಸಹಕಾರಿ ಸಂ ಉದ್ಘಾಟನೆ

Site inspection with officials, steps taken to beautify Taj Bawadi memorial
The Eightfold Path of Donation and Puja Festival
Published on

ವಿಜಯಪುರ: ಸ್ಥಳಿಯ ಬಿಎಲ್​ಡಿ ಸೌಹಾರ್ದ ಸಹಕಾರಿ ಸಂದ 11ನೇ ಶಾಖೆ ಬೆಂಗಳೂರು ಮಹಾನಗರದಲ್ಲಿ ಆ. 24 ರಂದು ಉದ್ಘಾಟನೆಗೊಳ್ಳಲಿದೆ.

ಬೆಂಗಳೂರಿನ ಶಿವಾನಂದ ವೃತ್ತ ಬಳಿಯ ಎಸ್​ಎಚ್​ಎಸ್​ ಪ್ಲಾಜಾದಲ್ಲಿರುವ ರಿಚಿ ರಿಚ್​ ಐಸಕ್ರೀಂ ಮೇಲ್ಭಾಗದ 3ನೇ ಮಹಡಿಯ ಸ್ವಂತ ಕೊಠಡಿಯಲ್ಲಿ ಕಾರ್ಯಾರಂಭಗೊಳ್ಳಲಿದೆ. ಅಂದು ಬೆಳಗ್ಗೆ 11ಕ್ಕೆ ಸೌಹಾರ್ದದ 11ನೇ ಶಾಖೆಯ ಉದ್ಘಾಟನಾ ಸಮಾರಂಭ ಕುಮಾರ ಕೃಪಾ ರಸ್ತೆಯ ಗಾಂಧಿ ಭವನದ ಎರಡನೇ ಮಹಡಿಯಲ್ಲಿರುವ ಮಹಾದೇವ ದೇಸಾಯಿ ಸಭಾಂಗಣದಲ್ಲಿ ನಡೆಯಲಿದೆ.

ತುಮಕೂರು ಸಿದ್ಧಗಂಗಾ ಮಠದ ಪಪೂ ಸಿದ್ಧಲಿಂಗ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸುವರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸುವರು. ಸಚಿವ ಎಂ.ಬಿ. ಪಾಟೀಲ ಅಧ್ಯತೆ ವಹಿಸುವರು. ಬಿಬಿಎಂಪಿ ಮಾಜಿ ಮಹಾಪೌರ ಗಂಗಾಬಿಕ ಮಲ್ಲಿಕಾರ್ಜುನ, ಉಪಮಹಾಪೌರ ಬಿ.ಎಸ್​. ಪುಟ್ಟರಾಜು, ಡಿಎಸ್​ ಮ್ಯಾಕ್ಸ್​ ಪ್ರಾಪರ್ಟಿಸ್​ ಸಂಸ್ಥೆ ಎಸ್​.ಪಿ. ದಯಾನಂದ ಹಾಗೂ ಉದ್ಯಮಿ ನಾಗಭೂಷಣ ರೆಡ್ಡಿ ಉಪಸ್ಥಿತರಿರುವರು.

ಸಮಾರಂಭದಲ್ಲಿ ವಿವಿಧ ೇತ್ರಗಳಲ್ಲಿ ಸಾಧನೆಗೈದ ವಿದ್ಯಾನಂದ ದೇಸಾಯಿ, ನಾನಾಸಾಹೇಬ ಹುಗ್ಗಿ, ಡಾ. ರವಿಕುಮಾರ ಮುಕರ್ತಿಹಾಳ, ಗುರುಪ್ರಸಾದ ನಡಗಡ್ಡಿ, ಮೌಲಾಲಿ ಆಲಗೂರ ಅವರನ್ನು ಸನ್ಮಾನಿಸಲಾಗುವುದೆಂದು ಸೌಹಾರ್ದದ ಅಧ್ಯಕ್ಷ ಸುನೀಲಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net