ಬ್ಲೇಜ್ ಮೂರ್ನಾಡು ತಂಡ ಚಾಂಪಿಯನ್

4 gkp 05
ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ
Published on

ಕುತ್ತ್ ನಾಡು ಬೆರಳಿನಾಡು ವಜ್ರ ಮಹೋತ್ಸವ ಹಾಕಿ ಪಂದ್ಯಾವಳಿ

ಗೋಣಿಕೊಪ್ಪ : ಕುತ್ತ್ ನಾಡು ಬೆರಳಿನಾಡು ಪ್ರೌಢಶಾಲೆಯ ವಜ್ರ ಮಹೋತ್ಸವ ಪ್ರಯುಕ್ತ ನಡೆದ ಪೈನಲ್ ಪಂದ್ಯದಲ್ಲಿ ಬ್ಲೆಜ್ ಮೂರ್ನಾಡು ತಂಡವು ಡ್ರಿಬ್ಲರ್ಸ್ ಹಂಪ್ ತಂಡವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿ ಚಾಂಪಿಯನ್‌ಪಟ್ಟ ಅಲಂಕರಿಸಿತು.

ತಂಡದ ಪರ ಅತಿಥೇಯ ಆಟಗಾರ ಅಂಕುರ್, ಹರ್ಪಾಲ್ , ಸಮೀರ್ ಮತ್ತು ಪ್ರಜ್ವಲ್ ಗಳಿಸಿದ ಗೋಲಿನಿಂದ ಜಯಗಳಿಸಿತು. ಡ್ರಿಬ್ಲರ್ಸ್ ಹಂಪ್ ತಂಡದ ಪರವಾಗಿ ಕರಣ್ ಏಕೈಕ ಗೋಲು ಗಳಿಸಿದರು. ಮೂರನೆಯ ಸ್ಥಾನವನ್ನು ಮಹದೇವ ಸ್ಪೋರ್ಟ್ಸ್ ಕ್ಲಬ್ ಬಲಂಬೆರಿ ತಂಡ ತನ್ನದಗಿಸಿಕೊಂಡಿತು. ಕೊಣನಕಟ್ಟೆ ನಾಲ್ಕನೆಯ ಸ್ಥಾನ ಪಡೆಯಿತು.

ಅತ್ಯುತ್ತಮ ಗೋಲ್ ಕೀಪರ್ ಆಗಿ ಶಾನ್ ಮೋಣ್ಣಪ್ಪ (ಬ್ಲೆಜ್‌ಮೂರ್ನಾಡು), ಅತ್ಯುತ್ತಮ ಹಿನ್ನಡೆ ಆಟಗಾರ ಕುಶ್ಮನ್ ಸಿಂಗ್( ಡ್ರಿಬ್ಲರ್ಸ್ ಹಂಪ್), ಅತ್ಯುತ್ತಮ ಮಧ್ಯಂತರ ಆಟಗಾರ ಸೋಮಣ್ಣ( ಡ್ರಿಬ್ಲರ್ಸ್ ಹಂಪ್), ಅತ್ಯುತ್ತಮ ಮುನ್ನಡೆ ಆಟಗಾರ ನಹಿಮ್( ಮಾಹದೇವ ಸ್ಪೋರ್ಟ್ಸ್ ಕ್ಲಬ್), ಪಂದ್ಯ ಪುರುಷೋತ್ತಮ ಆಟಗಾರ ಪ್ರಶಸ್ತಿಯನ್ನು ಹರ್ಪಾಲ್( ಬ್ಲೆಜ್ ಮೂರ್ನಾಡು) ಪಡೆದುಕೊಂಡರು.

ಪಂದ್ಯದ ನಿರ್ದೇಶಕರಾಗಿ ಸಣ್ಣುವಂಡ ಲೋಕೇಶ್ ನಂಜಪ್ಪ, ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ, ಕರವಂಡ ಅಪ್ಪಣ್ಣ, ವಿನೋದ್ ಕುಮಾರ್, ಮೂಕಚಂಡ ನಾಚ್ಚಪ್ಪ, ಕೊಂಡಿರ ಕೀರ್ತಿ ಕುಪ್ಪಂಡ ದಿಲನ್ ಕಾರ್ಯ ನಿರ್ವಹಿಸಿದರು. ಮಾಲೆಟಿರ ಶ್ರೀನಿವಾಸ್ ವೀಕ್ಷಕ ವಿವರಣೆ ನೀಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ರಂಗದಾಮಪ್ಪ ಮಾತನಾಡಿ, ಗ್ರಾಮಿಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ, ಸಂಸ್ಕಾರ ನೀಡಿ ದೇಶದ ಉತ್ತಮ ಪ್ರಜೆಗಳಾಗಿ ರೂಪಿಸುವುದರೊಂದಿಗೆ ಅವರ ಬದುಕನ್ನು ಸುಂದರವಾಗಿ ರೂಪಿಸಲು ಈ ವಿದ್ಯಾಸಂಸ್ಥೆ ಉತ್ತಮ ಕಾರ್ಯ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ದಾನಿಗಳು ಮುಂದೆ ಬಂದಿದ್ದು ಅದರ ಸದುಪಯೋಗವನ್ನು ಪಡೆದು ಉನ್ನತ ಸ್ಥಾನ ಅಲಂಕರಿಸುವಂತಾಗಲಿ ಎಂದು ಹಾರೈಸಿದರು.

ಆಡಳಿತ ಮಂಡಳಿಯ ಅಧ್ಯಕ್ಷ ಕಂಜಿತಂಡ ಮಂದಣ್ಣ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಬದುಕು ರೂಪಿಸಿಕೊಳ್ಳಲು ನಮ್ಮ ಹಿರಿಯರು ಕಟ್ಟಿದ ವಿದ್ಯಾಸಂಸ್ಥೆ ಇಂದು 63 ವರ್ಷಗಳನ್ನು ಪೂರೈಸಿದೆ. ಖಾಸಗಿ ವಿದ್ಯಾಸಂಸ್ಥೆಗಳ ಪೈಪೋಟಿ ನಡುವೆ ಕೂಡ ಉತ್ತಮ ಶಿಕ್ಷಣ ಮತ್ತು ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯ ಒದಗಿಸುತ್ತ ಸಂಸ್ಥೆ ಬೆಳೆಯುತ್ತಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಗ್ರಾಸ್‌ರೂಟ್ ಸಂಸ್ಥೆಯ ವ್ಯವಸ್ಥಾಪಕ ಹಾಗೂ ಇನಿಕ ರೆಸಾರ್ಟ್ ಮಾಲೀಕ ಸ್ಯಾಮಿಲ್ ವಿಲ್ಸನ್, ಐಡಿಸಿ ಸಂಸ್ಥೆಯ ಮುಖ್ಯಸ್ಥ ಸಿ.ಎಂ.ಕಾರ್ಯಪ್ಪ ಮತ್ತು ಶಾಲಾ ಆಡಳಿತ ಮಂಡಳಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಟ್ರೋಫಿ ದಾನಿಗಳಾದ ಕೊಲ್ಲಿರ ಉಷಾ ಚೋಂದಮ್ಮ ಮತ್ತ್ತು ಜೀತ್ ಪುಣಚ್ಚ, ಮುಂಡಂಡ ವರುಣ್ ಗಣಪತಿ, ನಾಮೇರ ಗಣಪತಿ, ಕಳ್ಳಿಚಂಡ ಚೋಂದಮ್ಮ, ಚೆರಂಡ ಮೋಹನ್, ಕುಶಾಲಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net