

ಅರಸೀಕೆರೆ (ಗ್ರಾಮಾಂತರ) : ಮಹಾರಾಷ್ಟ್ರದ ರಾಮಗಿರಿಯ ಗಂಗಾಗಿರಿ ಮಹಾರಾಜ್ ಎಂಬುವರು ಮಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮುಸ್ಲಿಮರು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ-206ರ ಕನಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮುಸ್ಲಿಂ ಜಮಾತ್ ಕಮಿಟಿಯ ಅಧ್ಯಕ್ಷ ಸೈಯದ್ ರಹಿಂ ಸಾಬ್ ಮಾತನಾಡಿ, ಗಂಗಾಗಿರಿ ಮಹಾರಾಜರು ಸಮಾಜದ ಸ್ವಾಸ್ಥೃವನ್ನು ಹಾಳು ಮಾಡವಂತ ಹೇಳಿಕೆ ನೀಡಿದ್ದಾರೆ. ಧರ್ಮ, ಧರ್ಮಗಳ ಬಗ್ಗೆ ಸಂಘರ್ಷ ಉಂಟು ಮಾಡಲು ಯತ್ನಿಸಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉಪ ತಹಸೀಲ್ದಾರ್ ಲಿಂಗರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮುಸ್ಲಿಂ ಸಮಾಜದ ಕಾರ್ಯದರ್ಶಿ ಸರ್ಫಾನ್, ಖಜಾಂಚಿ ಶಬ್ಬೀರ್, ಸದಸ್ಯರಾದ ದಾದಾಪೀರ್ ಸಾಬ್, ಜಾನ್ ಸಾಬ್, ಮನ್ಸೂರ್, ಕೆ.ಸಿ.ಖಾದರ್, ಭಾಷಾ ಸಾಬ್. ಶಫಿ ಅಹಮದ್ ಸಾಬ್. ಮೊಹಮ್ಮದ್ ಇಲಿಯಾಜ್ ಸಾಬ್ ಇತರರು ಇದ್ದರು.