ಪೌರಕಾರ್ಮಿಕ ಕಾಲನಿಯಲ್ಲಿ ಕಂಬಳಿ ವಿತರಣೆ

32
Published on

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಪೌರಕಾರ್ಮಿಕ ಕಾಲನಿ ನಿವಾಸಿಗಳಿಗೆ ಕಂಬಳಿ ವಿತರಿಸಲಾಯಿತು.

ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ಜೀದದಾರ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರದ ನಿರ್ದೇಶಕ ಗಿರೀಶ್, ದೇಶದ ಶೋಷಿತರಿಗೆ ಸಮಾನತೆ ನೀಡಲು ಜೀವನವನ್ನೇ ಮುಡಿಪಾಗಿಟ್ಟ ಡಾ.ಬಿ.ಆರ್.ಅಂಬೇಡ್ಕರ್, ದೇಶ, ವಿದೇಶಗಳಲ್ಲಿ ಶಿಕ್ಷಣ ಪಡೆದು ಶೋಷಿತರ ಸಮಾನತೆಗಾಗಿ ಶಾಸನ ಬದ್ಧ ಹಕ್ಕು ನೀಡಲು ಸಂವಿಧಾನ ರಚಿಸಿದರು. ಹಣ, ಅಧಿಕಾರದ ಲಾಲಸೆಗೊಳಗಾಗದೆ ನಿಸ್ವಾರ್ಥ ಸೇವೆ ಸಲ್ಲಿಸಿದರು. ವಿಶ್ವ ಸಂಸ್ಥೆ ಅವರ ಜನ್ಮ ದಿನಾಚರಣೆಯನ್ನು ವಿಶ್ವ ಜ್ಞಾನ ದಿನಾಚರಣೆಯನ್ನಾಗಿ ಆಚರಿಸಲು ಘೋಷಣೆ ಮಾಡಿದೆ. ಅವರನ್ನು ವಿಶ್ವ ಗುರುಗಳನ್ನಾಗಿ ಸ್ವೀಕರಿಸುವ ಮನಸ್ಸುಗಳು ಹುಟ್ಟಿಕೊಳ್ಳಬೇಕಾಗಿದೆ ಎಂದರು.

ಮುಖಂಡರಾದ ಸುರೇಶ್, ಉಮೇಶ್, ಮಮತಾ, ಸೂರಜ್, ಸದಾಶಿವ, ಚಂದ್ರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net