ಕಾಡನ್ನು ಬೆಳೆಸದಿದ್ದರೂ ಉಳಿಸಿಕೊಳ್ಳುವ ಕೆಲಸವಾಗಲಿ: ಮಧುರ ಮಂಡ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ವಿನಯ್‌ಕುಮಾರ್ ಮನವಿ

Blanket distribution ceremony Mandya
Published on

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಡುಗಳ ನಾಶದಿಂದಾಗಿ ನಾಡಿಗೆ ಕಂಟಕ ಎದುರಾಗುತ್ತಿವೆ. ಅಕಾಲಿಕ ಮಳೆ, ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಜತೆಗೆ ಕಾಡುಪ್ರಾಣಿಗಳು ಕಾಡಿನಿಂದ ಹಳ್ಳಿ ಮತ್ತು ನಗರಕ್ಕೆ ಪ್ರವೇಶಿಸುತ್ತಿವೆ ಎಂದು ಮಧುರ ಮಂಡ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ವಿನಯ್‌ಕುಮಾರ್ ಆತಂಕ ವ್ಯಕ್ತಪಡಿಸಿದರು.

ಅರುವಿ ಟ್ರಸ್ಟ್‌ನ ವಾರ್ಷಿಕೋತ್ಸವದ ಅಂಗವಾಗಿ ಮಧುರ ಮಂಡ್ಯ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ನಾಗರಹೊಳೆಯಲ್ಲಿ ಆದಿವಾಸಿಗಳ ನೂರು ಕುಟುಂಬಕ್ಕೆ ಕಂಬಳಿ ವಿತರಿಸಿ ಮಾತನಾಡಿದ ಅವರು, ನಾವು ಕಾಡನ್ನು ಬೆಳೆಸದಿದ್ದರೂ ಪರವಾಗಿಲ್ಲ. ಆದರೆ ಇರುವ ಕಾಡನ್ನು ಉಳಿಸಿಕೊಳ್ಳಬೇಕಿದೆ. ಇದರಿಂದ ಕಾಡು ಪ್ರಾಣಿಗಳು ಅರಣ್ಯದಲ್ಲಿಯೇ ಇರುತ್ತವೆ. ಜತೆಗೆ ಆದಿವಾಸಿ ಸಮುದಾಯ ಉಳಿಯಲಿದೆ ಎಂದರು.

ಸಕಲವೂ ಇದ್ದು ಬದುಕು ನಡೆಸುವುದು ದುಃಸ್ತರ ಎಂದುಕೊಳ್ಳುವ ನಾವು ಸಮಸ್ಯೆಗಳನ್ನೇ ಹೊದ್ದುಕೊಂಡು ಮಲಗಿರುವ ನೆಲ, ಜಲ ಪರಿಸರ ಸಂರಕ್ಷಣೆಗಾಗಿ ತಮ್ಮ ಬದುಕನ್ನ ಮುಡುಪಾಗಿಟ್ಟಿರುವ ಆದಿವಾಸಿ ಬಂಧುಗಳಗೆ ಕಂಬಳಿಗಳನ್ನು ವಿತರಣೆ ಮಾಡುತ್ತಿರುವುದಕ್ಕೆ ಸಾರ್ಥಕ ಭಾವ ಮೂಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಈ ರೀತಿಯ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

ಅರುವಿ ಟ್ರಸ್ಟ್ ಸಂಸ್ಥಾಪಕಿ ಅರುಣ ಈಶ್ವರ, ಕಾವೇರಿ ನೀರಾವರಿ ನಿಗಮದ ಕಿರಿಯ ಇಂಜಿನಿಯರ್ ಜಿ.ಎನ್.ಕೆಂಪರಾಜು, ಮಂಜುನಾಥ್ ಮುತ್ತಗೆರೆ, ಗುರಣ್ಣ, ಆನಂದ್, ಕೃಷ್ಣಪ್ಪ, ನಂದೀಶ್, ಕಾರಸವಾಡಿ ಮಹಾದೇವು, ಮಂಗಲ ಲಂಕೇಶ್, ದೇವರಾಜ್ ಕೊಪ್ಪ, ಎಸ್.ನಾರಾಯಣ್, ಉಮಾಪತಿ, ಶೇಖರ್ ಹನಿಯಂಬಾಡಿ, ಬಸವರಾಜ್ ಸಂತೆಕಸಲಗೆರೆ, ಕೋಮಲ್ಕುಮಾರ್, ಮಹಾಲಕ್ಷ್ಮೀ, ಕೋಮಲಾ ಆನಂದ್, ನಾಗಮ್ಮ, ತಾಯಮ್ಮ, ಪದ್ಮಾ ಮೋಹನ್ ಇದ್ದರು. ಇದೇ ಸಂದರ್ಭದಲ್ಲಿ ಕಾಡು ಕುರುಬ ಸಮುದಾಯದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net