ನಟ ಪ್ರಕಾಶ್‌ರಾಜ್ ಬ್ಯಾನರ್‌ಗೆ ಬ್ಲೇಡ್

7bdvt3
ಭದ್ರಾವತಿಯಲ್ಲಿ ಪ್ರಕಾಶ್‌ರಾಜ್ ಬ್ಯಾನರ್ ಹರಿದಿರುವುದು.
Published on

ಭದ್ರಾವತಿ: ನಗರಕ್ಕೆ ಚಲನಚಿತ್ರ ನಟ ಪ್ರಕಾಶ್‌ರಾಜ್ ಆ.8ರಂದು ಆಗಮಿಸುವ ಹಿನ್ನೆಲೆಯಲ್ಲಿ ಸ್ವಾಗತ ಕೋರಲು ನಗರದ ಅಂಡರ್ ಬ್ರಿಡ್ಜ್ ನಲ್ಲಿ ಅಳವಡಿಸಲಾಗಿದ್ದ ಬ್ಯಾನರ್‌ನ್ನು ಕಿಡಿಗೇಡಿಗಳು ಬ್ಲೇಡ್‌ನಿಂದ ಹರಿದಿದ್ದಾರೆ. ನ್ಯೂಟೌನ್ ಸರ್ ಎಂ.ವಿ.ಕಲಾ ಹಾಗೂ ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಮಂಗಳವಾರ ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿಗಳೊಂದಿಗೆ ರಂಗಭೂಮಿ, ಸಿನಿಮಾ ಹಾಗೂ ಸಮಾಜ ಕುರಿತಂತೆ ಸಂವಾದ ಹಮ್ಮಿಕೊಳ್ಳಲಾಗಿತ್ತು. ನಂತರ ಜನ್ನಾಪುರದ ಅನಾಥಾಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಈ ನಡುವೆ ಈ ಕಾರ್ಯಕ್ರಮಗಳ ನೇತೃತ್ವ ವಹಿಸಿಕೊಂಡಿರುವ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.ರಾಜು ನಗರದ ಕೆಲವೆಡೆ ಪ್ರಕಾಶ್‌ರಾಜ್ ಅವರ ಬ್ಯಾನರ್ ಅಳವಡಿಸಿದ್ದರು. ಸೋಮವಾರ ಅಂಡರ್ ಬ್ರಿಡ್ಜ್ ಬಳಿ ಇರುವ ಬ್ಯಾನರ್‌ನಲ್ಲಿ ಪ್ರಕಾಶ್ ರಾಜ್ ಅವರ ಚಿತ್ರವನ್ನು ಬ್ಲೇಡಿನಿಂದ ಹರಿಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net