ನಗ್ನ ವಿಡಿಯೋ ಹರಿಬಿಡುವುದಾಗಿ ಬ್ಲ್ಯಾಕ್​ವೆುೕಲ್

nude vedio
Published on

ಹುಬ್ಬಳ್ಳಿ: ವಾಟ್ಸ್​ಆಪ್ ಮೂಲಕ ಪರಿಚಯವಾದ ಮಹಿಳೆಯೊಬ್ಬರು, ಇಲ್ಲಿನ ವಿದ್ಯಾನಗರ ನಿವೃತ್ತ ಬ್ಯಾಕ್ ಉದ್ಯೋಗಿ ರಾಘವೇಂದ್ರ ಎನ್ನುವಾತನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಪ್ರಕರಣ ಸಿಇಎನ್ ಕೈಂ ಠಾಣೆಯಲ್ಲಿ ದಾಖಲಾಗಿದೆ.

ವಾಟ್ಸ್​ಆಪ್ ಮೂಲಕ ಪರಿಚಯವಾದ ಮಹಿಳೆಯು, ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾಳೆ. ನಂತರ ಸ್ಕ್ರೀನ್ ರೆಕಾರ್ಡ ಮಾಡಿಕೊಂಡು ರಾಘವೇಂದ್ರ ಮುಖಚರ್ಯು ಹೋಲುವಂತಿರುವ ನಗ್ನ ಫೋಟೋ ಜತೆಗೆ ಎಡಿಟ್ ಮಾಡಿದ್ದಾಳೆ. ಫೋಟೋ ಹಾಗೂ ವಿಡಿಯೋಗಳನ್ನು ಮಾಡಿ ಮರಳಿ ವಾಟ್ಸ್​ಆಪ್​ಗೆ ಕಳುಹಿಸಿ ಹಣದ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸುತ್ತಿದ್ದಾಳೆ ಎಂದು ದೂರಿನಲ್ಲಿ ರಾಘವೇಂದ್ರ ಉಲ್ಲೇಖಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net