

ಮಂಡ್ಯ: ಜಿಲ್ಲೆಯಲ್ಲಿ ನಾಲೆ ದುರಂತ ಪ್ರಕರಣಗಳು ಮರುಕಳಿಸುತ್ತಲೇ ಇದೆ. ಮಂಗಳವಾರ ಪಾಂಡವಪುರ ತಾಲೂಕಿನಲ್ಲಿ ಐವರು ಜಲಸಮಾಧಿಯಾಗಿದ್ದಾರೆ. ಆದರೆ ಇಂತಹ ಘಟನೆ ನಡೆಯದಂತೆ ತೆಗೆದುಕೊಳ್ಳಬೇಕಾದ ಕ್ರಮ ಮಾತ್ರ ಶೂನ್ಯ.
ಇದೇ ವರ್ಷ ಜುಲೈ ಅಂತ್ಯದಲ್ಲಿ ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದ ನಾಲೆಗೆ ಕಾರು ಬಿದ್ದು ಐವರು ಮೃತಪಟ್ಟ ಪ್ರಕರಣದ ವೇಳೆ ಬ್ಲ್ಯಾಕ್ಸ್ಪಾಟ್ ಸರ್ವೇಗೆ ಜಿಲ್ಲಾಧಿಕಾರಿ ನೀಡಿದ ಸೂಚನೆ ಕಡತದಲ್ಲಿಯೇ ಭದ್ರವಾಗಿ ಉಳಿಯಿತೇ ಎನ್ನುವ ಅನುಮಾನ ಕಾಡುತ್ತಿದೆ.
ಬ್ಲ್ಯಾಕ್ಸ್ಪಾಟ್ ಗುರುತಿಸಿ ವರದಿ ನೀಡುವಂತೆ ನಾಲ್ಕು ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮಿತಿಗೆ ಸೂಚನೆ ನೀಡಲಾಗಿತ್ತು. ಜಿಲ್ಲೆಯಲ್ಲಿ ನಾಲೆ ದುರಂತ ಮರುಕಳಿಸುತ್ತಿದ್ದ ಹಿನ್ನಲೆಯಲ್ಲಿ ತಡೆಗೋಡೆ ಇಲ್ಲದ ನಾಲೆ ಹಾಗೂ ಕೆರೆಗಳಿಂದ ಅಪಾಯಕಾರಿ ಸ್ಥಿತಿಗೆ ಕಾರಣವಾಗಿದೆ. ಆದ್ದರಿಂದ ನಾಲೆ, ಕೆರೆ ಬದಿ ತಡೆಗೋಡೆ/ಕ್ರಾಶ್ ಬಾರಿಯರ್ ನಿರ್ಮಿಸಲು ಸಮಿತಿ ರಚನೆ ಮಾಡಲಾಗಿದೆ ಎಂದಿದ್ದರು.
ಅದರಂತೆ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿ ನಾಲ್ಕು ವಿಭಾಗದಿಂದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳನ್ನು ನಿಯೋಜಿಸಲಾಗಿತ್ತು. ಪ್ರತಿ ತಾಲೂಕಿಗೂ ನಾಲ್ವರು ಅಧಿಕಾರಿಗಳಿರುವ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿಗೆ ಅತಿ ಅವಶ್ಯಕವಾಗಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸುವಂತೆ ಡಿಸಿ ಸೂಚನೆ ನೀಡಿದ್ದರು. ಆದರೆ ಸರ್ವೇಯಾಗಲಿ ಅಥವಾ ಅನಾಹುತ ತಡೆಯಲು ತೆಗೆದುಕೊಳ್ಳಬೇಕಾದ ಕ್ರಮವಾಗಲಿ ಅನುಷ್ಠಾನಕ್ಕೆ ಬರಲೇ ಇಲ್ಲ ಎನ್ನುವುದು ವಾಸ್ತವ್ಯ ಸತ್ಯ. ದುರಂತ ನಡೆದ ಒಂದೆರೆಡು ದಿನ ಮಾತ್ರ ಚರ್ಚೆಗಷ್ಟೇ ಸೀಮಿತವಾಗಿ ಮತ್ತೆ ಮರೆತು ಹೋಗುವ ಖಯಾಲಿ ಇನ್ನೆಷ್ಟು ದಿನ ಮುಂದುವರೆಯಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಜಿಲ್ಲೆಯಲ್ಲಿ ನಡೆದಿರುವ ದುರಂತ