

ಹುಬ್ಬಳ್ಳಿ: ಪ್ರಾಧ್ಯಾಪಕಿಯೊಬ್ಬರಿಗೆ ಯುವಕನೊಬ್ಬ ಅಶ್ಲೀಲ ವಿಡಿಯೋ, ಭಾವಚಿತ್ರ, ವಿಡಿಯೋ ಕಾಲ್ ಸ್ಕ್ರೀನ್ ರೆಕಾರ್ಡ್ ಕಳುಹಿಸಿ ಮಾನಸಿಕ ಹಿಂಸೆ ನೀಡಿದ ಆರೋಪದಡಿ ಇಲ್ಲಿಯ ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಶಶಿ(25) ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಾಧ್ಯಾಪಕಿಯ ಅಶ್ಲೀಲ ವಿಡಿಯೋ, ಪೋಟೊ, ಸ್ಕ್ರೀನ್ ಶಾಟ್ ಇಟ್ಟುಕೊಂಡು ಮದುವೆ ಆಗುವಂತೆ ಯುವಕ ಪೀಡಿಸಿದ್ದಾನೆ. ಪ್ರಾಧ್ಯಾಪಕಿಯ ಸಹೋದರನಿಗೆ ಇವುಗಳನ್ನು ಕಳಹಿಸಿದ್ದಾನೆ. ಸಹದ್ಯೋಗಿಗಳು ಹಾಗೂ ಕುಟುಂಬಸ್ಥರಿಗೆ ವಾಟ್ಸ್ ಆ್ಯಪ್ ಮೂಲಕ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.