ಮಹಿಳೆಗೆ ಬ್ಲಾಕ್‌ಮೇಲ್ ಆರೋಪಿ ಬಂಧನ

Vijay Gowda
Published on

ಮೂಡುಬಿದಿರೆ: ಪುತ್ತಿಗೆ ಗ್ರಾಮದಲ್ಲಿ ಮನೆಯ ಕೂಲಿ ಕೆಲಸಕ್ಕೆ ಬಂದಾತ ಮಹಿಳೆಯೊಬ್ಬರ ಸ್ನೇಹ ಬೆಳೆಸಿ ನಗ್ನಚಿತ್ರಗಳನ್ನು ಮುಂದಿಟ್ಟು ಬ್ಲಾಕ್‌ಮೇಲ್ ಮಾಡುತ್ತಿದ್ದು, ಆತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಪುತ್ತಿಗೆ ಗ್ರಾಮದ ನಿವಾಸಿ ವಿಜಯ್ ಗೌಡ ಬಂಧಿತ. ಮಹಿಳೆಯ ಮನೆಗೆ ಕೂಲಿ ಕೆಲಸಕ್ಕೆ ಬರುತ್ತಿದ್ದ ವಿಜಯ್ ಗೌಡ ನಂತರ ಮೊಬೈಲ್ ನಂಬರ್ ಪಡೆದು ಸಲುಗೆ ಬೆಳೆಸಿದ್ದಾನೆ. ಬಳಿಕ ಕರೆ ಮಾಡಿ, ವಾಟ್ಸ್‌ಆ್ಯಪ್‌ನಲ್ಲಿ ನಗ್ನಚಿತ್ರಗಳನ್ನು ಕಳುಹಿಸುವಂತೆ ಒತ್ತಡ ಹೇರಿದ್ದು, ಇಲ್ಲದಿದ್ದರೆ ತನಗೆ ನಿನ್ನ ಜತೆ ಸಂಬಂಧ ಇದೆಯೆಂದು ಸುದ್ದಿ ಹಬ್ಬಿಸುವುದಾಗಿ ಬೆದರಿಸಿದ್ದಾನೆ.

ಒತ್ತಡಕ್ಕೆ ಬಿದ್ದ ಮಹಿಳೆ ಯುವಕನಿಗೆ ನಗ್ನಚಿತ್ರಗಳನ್ನು ಕಳುಹಿಸಿದ್ದು, ಅದೇ ಫೋಟೋಗಳನ್ನು ಮುಂದಿಟ್ಟು ಯುವಕ ಬ್ಲಾಕ್‌ಮೇಲ್ ಮಾಡಿದ್ದಾನೆ. ನಂತರ ತನ್ನೊಂದಿಗೆ ಲೈಂಗಿಕ ಕ್ರಿಯೆ, ಹಣ ನೀಡುವಂತೆ ಒತ್ತಾಯಿಸಿದ್ದು, ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡುತ್ತೇನೆ, ಮನೆಯವರಿಗೂ ಫೋಟೋ ಕಳುಹಿಸುತ್ತೇನೆ ಎಂದು ಮಹಿಳೆಯನ್ನು ಬ್ಲಾಕ್ ಮೇಲ್ ಮಾಡಿದ್ದಾನೆ. ಆ.19ರಂದು ಎರಡು ಸಾವಿರ ರೂ. ತೆಗೆದುಕೊಂಡಿದ್ದಾನೆ. ಆ.28ರಂದು ಮನೆಗೆ ತೆರಳಿ ಹಣ ನೀಡುವಂತೆ ಪೀಡಿಸಿದ್ದು, ಹಣ ನೀಡದೇ ಇದ್ದಾಗ ನಗ್ನಚಿತ್ರಗಳನ್ನು ತನ್ನ ಗೆಳೆಯರಿಗೆ ಕಳುಹಿಸಿ ಮಾನ ಹರಾಜು ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net