

ಧಾರವಾಡ: ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಗಡಿಯಲ್ಲಿರುವ ಅಳ್ನಾವರದ ಇಂದಿರಮ್ಮನ ಕೆರೆ ಸುಮಾರು ಒಂದು ಸಾವಿರ ಎಕರೆ ವಿಸ್ತೀರ್ಣವಿದೆ. 2020ರಲ್ಲಿ ಪ್ರವಾಹ ತಲೆದೋರಿ ಅನಾಹುತ ಸೃಷ್ಟಿಸಿತ್ತು. ಕೆರೆಯ ತಡೆಗೋಡೆ ಒಡೆದು ರೈತರ ಜಮೀನುಗಳಲ್ಲಿನ ಬೆಳೆ, ಸಾರ್ವಜನಿಕ ಆಸ್ತಿಗೆ ಹಾನಿಯಾಗಿತ್ತು. ಕೆರೆಗೆ ಬೃಹತ್ ತಡೆಗೋಡೆ ಹಾಗೂ ಇತರ ಕಾಮಗಾರಿಗಾಗಿ ಸರ್ಕಾರ 9.40 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಿಸಿತ್ತು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಗುತ್ತಿಗೆದಾರ ಕಾಮಗಾರಿ ಆರಂಭಿಸದಿರುವುದರಿAದ ವಿಳಂಬವಾಗಿದೆ. ಗುತ್ತಿಗೆದಾರರನ್ನು ಕಪು÷್ಪಪಟ್ಟಿಗೆ ಸೇರಿಸಿ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಅಳ್ನಾವರ ತಾಲೂಕಿನ ಹುಲ್ಲೆಕೇರಿಯ ಇಂದಿರಮ್ಮನ ಕೆರೆಗೆ ಮಂಗಳವಾರ ಭೇಟಿ ನೀಡಿ ಕೆರೆಗೆ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.
ಗ್ರಾಮಸ್ಥರಿಂದ ಮಾಹಿತಿ ಪಡೆದ ಸಚಿವರು ಅಽಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಗುತ್ತಿಗೆದಾರ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಮಾಹಿತಿ ತಿಳಿದು ಕೂಡಲೇ ಕಪ್ಪುಪಟ್ಟಿಗೆ ಸೇರಿಸಿ ಎಂದು ಸೂಚಿಸಿದರು.
ತಡೆಗೋಡೆ ನಿರ್ಮಿಸಿರುವುದರಿಂದ ಆಗುತ್ತಿರುವ ಸಮಸ್ಯೆಗಳನ್ನು ಗ್ರಾಮಸ್ಥರು ಸಚಿವರ ಗಮನಕ್ಕೆ ತಂದರು. ಕೆರೆ ದಾಟಿ ಗ್ರಾಮಕ್ಕೆ ಹೋಗಲು ಮೇಲ್ಸೇತುವೆ ಇಲ್ಲ. ಕೆರೆ ಭರ್ತಿಯಾದಾಗ ಪರದಾಡುವುದು ತಪ್ಪುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಈ ಬಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ಕ್ರಮ ಕೈಗೊಳ್ಳಬೇಕು. ಟೆಂಡರ್ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ, ಕೆರೆಯ 2 ನಾಲೆಗಳ ಕಾಮಗಾರಿಯನ್ನೂ ಪ್ರಾರಂಭಿಸಬೇಕು ಎಂದು ಸೂಚಿಸಿದರು.
ಜಿಲ್ಲಾಽಕಾರಿ ದಿವ್ಯ ಪ್ರಭು, ಸಣ್ಣ ನೀರಾವರಿ ಹಾಗೂ ಅಂತರ್ಜಲ ಇಲಾಖೆ ಕಾರ್ಯದರ್ಶಿÀ ರಾಘವನ್, ಗ್ರಾಮಸ್ಥರು ಉಪಸ್ಥಿತರಿದ್ದರು.