ಬೈಕ್ ನಂಬರ್ ಪ್ಲೇಟ್ ಮೇಲೆ ಕಪ್ಪು ಸ್ಟಿಕ್ಕರ್

Published on

ಮೈಸೂರು: ಸಂಚಾರ ನಿಯಮ ಉಲ್ಲಂಘನೆ ದಂಡ ತಪ್ಪಿಸಿಕೊಳ್ಳಲು ಬೈಕ್ ನಂಬರ್ ಪ್ಲೇಟ್ ಮೇಲೆ ಕಪ್ಪು ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುತ್ತಿದ್ದ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.

ಅಜೀಜ್ ಸೇಠ್ ನಗರದ ಶೇಕ್ ಮಜರ್ ಅಹ್ಮದ್ ಸಿಕ್ಕಿಬಿದ್ದು, ನಂಬರ್ ಪ್ಲೇಟ್ ಮೇಲೆ ಸ್ಟಿಕ್ಕರ್ ಅಂಟಿಸಿದ್ದ ಯಮಾಹಾ ಲಿಬರೋ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಜಯಲಕ್ಷ್ಮೀಪುರಂನ ಸೇಂಟ್ ಜೋಸೆಫ್ ಜಂಕ್ಷನ್ ಬಳಿ ವಿವಿಪುರಂ ಸಂಚಾರಿ ಠಾಣಾ ನೌಕರ ಮೋಹನ್, ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಿಗ್ನಲ್ ಲೈಟ್ ಬಳಿ ನಂಬರ್ ಪ್ಲೇಟ್ನ ಎರಡು ಬದಿಯಲ್ಲಿ ಸ್ಟಿಕ್ಕರ್ ಅಂಟಿಸಿದ್ದ ಬೈಕ್ ನಿಂತಿದೆ. ಇದನ್ನು ಗಮನಿಸಿದ ಸಿಬ್ಬಂದಿ ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡದಿದ್ದರಿಂದ ವಶಕ್ಕೆ ಪಡೆಯಲಾಗಿದೆ. ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net