

ಕಾಸರಗೋಡು: ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ, ಅರೆನಗ್ನಗೊಳಿಸಿ ಯುವತಿಯೊಂದಿಗೆನಿಲ್ಲಿಸಿ ಫೋಟೋ ತೆಗೆದು ಬ್ಲ್ಯಾಕ್‌ಮೇಲ್ ಮಾಡಿ 5.45ಲಕ್ಷ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಲತೀಫ್, ಲಾಲಾ ಕಬೀರ್ ಸೇರಿ ಆರು ಮಂದಿ ವಿರುದ್ಧ ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬಾಲನಡ್ಕ ನಿವಾಸಿ ಮೂಸಾ ಅವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಸೆಪ್ಟಂಬರ್ 23ರಂದು ಘಟನೆ ನಡೆದಿದ್ದು, ಯುವತಿಯೊಂದಿಗೆ ತೆಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದಾಗಿ ತಿಳಿಸಿ ಹಲವು ಬಾರಿ ತನ್ನಿಂದ ಹಣ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.