

ಮಡಿಕೇರಿ: ವಿಶ್ವ ಟೆಕ್ವಾಂಡೊ ಫೆಡರೇಷನ್ ಸಂಸ್ಥೆಯು ನಡೆಸುವ ಪರೀಕ್ಷೆಯಲ್ಲಿ ಮಡಿಕೇರಿಯ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ೯ ವಿದ್ಯಾರ್ಥಿಗಳು ಬ್ಲ್ಯಾಕ್ ಬೆಲ್ಟ್ ಪಡೆದುಕೊಂಡಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ತೆನ್ನಿರ ಶಾನ್ ಪೊನ್ನಪ್ಪ, ಎಂ.ಪ್ರೀತಮ್ ಹರೀಶ್, ಎಮ್.ಐಚಂಡ ತನೀಶ್ ತಮ್ಮಯ್ಯ, ಮಾನ್ಯರಾಜ್, ಬೊಮ್ಮುಡಿ ದೇವಿಶ್ರೀ ಪ್ರಭಾಕರ್, ಜೀವನ್ ಮುತ್ತುಕುಮಾರ್, ಆರ್.ಕುಶ, ಪಿ.ಬಿ.ಶಿವ, ಅರುಣ್ ಕುಮಾರ್ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ.
ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಡಬ್ಯ್ಲುಟಿಎಫ್ ಅಂತರರಾಷ್ಟ್ರೀಯ ಸಂಸ್ಥೆ ಕುಕ್ಕಿವಾನ್ ಮುಖ್ಯ ಕಚೇರಿ ನೀಡಿರುವ ಪ್ರಮಾಣ ಪತ್ರ ಮತ್ತು ಬ್ಲ್ಯಾಕ್ ಬೆಲ್ಟ್‌ನ್ನು ಅಂತರರಾಷ್ಟ್ರೀಯ ತರಬೇತುದಾರ ಹಾಗೂ ತೀರ್ಪುಗಾರ ಎಚ್.ಮುತ್ತಪ್ಪ ಲಕ್ಷ್ಮಣ್ ವಿದ್ಯಾರ್ಥಿಗಳಿಗೆ ವಿತರಿಸಿದರು. ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ.ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.