ಲಿಂಗಾಯತರಿಗೆ ಪ್ರಾತಿನಿಧ್ಯ; ತಿರುಚಿದ ಹೇಳಿಕೆಗಳಿಗೆ ಕಿವಿಗೊಡಬೇಡಿ ಎಂದ ಬಿಜೆಪಿ ವಕ್ತಾರ ಎಂ.ಬಿ.ಝಿರಲಿ

IMG-20230316-WA0043.jpg
Published on

ಬೆಳಗಾವಿ: 'ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವದನ್ನು ಸಹಿಸದ ವಿರೋಧಿಗಳು, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಯವರ ವಿರುದ್ದ ಷಡ್ಯಂತ್ರ ಹೆಣದಿದ್ದು, ಅವರು ಲಿಂಗಾಯತರ ವಿರುದ್ದ ಹೇಳಿಕೆ ನೀಡಿದ್ದಾರೆ ಎನ್ನುವದು, ಸತ್ಯಕ್ಕೆ ದೂರವಾದ ಮಾತು' ಎಂದು ರಾಜ್ಯ ಬಿಜೆಪಿ ವಕ್ತಾರ ಎಮ್.ಬಿ.ಝಿರಲಿ ಹೇಳಿದ್ದಾರೆ.

ಗುರುವಾರ ಪ್ರಕಟಣೆ ನೀಡಿರುವ ಅವರು, 'ಕೆಲ ಪತ್ರಿಕೆಗಳಲ್ಲಿ ಲಿಂಗಾಯತರಿಗೆ ಪ್ರಾಮುಖ್ಯತೆ ಅವಶ್ಯಕತೆ ಇಲ್ಲಾ ಎಂಬ ಸುಳ್ಳು ಹೇಳಿಕೆಯನ್ನು ಪ್ರಕಟಿಸಿದ್ದು ಈ ರೀತಿಯಾದ ಯಾವುದೆ ಹೇಳಿಕೆ ಸಿ.ಟಿ.ರವಿಯವರು ಹೇಳಿಲ್ಲ. ಅವರ ಏಳಿಗೆಯನ್ನು ಸಹಿಸದ ಹಾಗೂ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿರುದ್ದ ಸಂಚು ರೂಪಿಸುವ ಇದೊಂದು ವಾಮಮಾರ್ಗವಾಗಿದ್ದು, ಇದನ್ನು ಬಿಜೆಪಿ ಪಕ್ಷ ಖಂಡಿಸುತ್ತದೆ. ಬಿಜೆಪಿ ಸರ್ಕಾರದಲ್ಲಿ ಲಿಂಗಾಯತ ಮುಖ್ಯಮಂತ್ರಿನೆ ಇರುವಾಗ, ಅನೇಕ ಪ್ರಮುಖ ಖಾತೆಗಳಲ್ಲಿ ಸಿಂಹ ಪಾಲು ಪಡೆದಿರುವ ಲಿಂಗಾಯತರೆ ಇರುವಾಗ, ಇಂತಹ ಹೇಳಿಕೆ ಹೇಳಲು ಸಾಧ್ಯವಾದರು ಹೇಗೆ? ಲಿಂಗಾಯತರ ಪೂಣ್ಯ ಕ್ಷೇತ್ರ ಬಸವಣ್ಣನವರ ಜನ್ಮಸ್ಥಳ ಅಭಿವೃದ್ಧಿಗೆ 651 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಲಿಂಗಾಯತರಿಗೆ ನಿಗಮ ಸ್ಥಾಪಿಸಿದ್ದು ಬಿಜೆಪಿ ಸರ್ಕಾರ. ಹೀಗೆ ಹಿಂದೆದು ಕಾಣದಷ್ಟು ಕಾರ್ಯವನ್ನು ಈ ಬಿಜೆಪಿ ಸರ್ಕಾರ ಮಾಡಿದೆ.‌ ಚುನಾವಣೆಯ ಕಾಲದಲ್ಲಿ ಬಿಜೆಪಿ ಬಗ್ಗೆ ಹಾಗೂ ಬಿಜೆಪಿ ನಾಯಕರ ಬಗ್ಗೆ ಕೆಲ ಸುಳ್ಳು ಹೇಳಿಕೆ ಪ್ರಕಟವಾಗುತಿದ್ದು ಇಂತಹ ತಿರುಚಿದ ಮಾತುಗಳಿಗೆ ಯಾರು ಕಿವಿಕೊಡಬಾರದು' ಎಂದು ರಾಜ್ಯ ಬಿಜೆಪಿ ವಕ್ತಾರ ಎಮ್.ಬಿ.ಝಿರಲಿ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net