ಬಿಕೆಜಿ ಗ್ಲೋಬಲ್ ಶಾಲೆ ವಿದ್ಯಾರ್ಥಿಗಳ ಸಾಧನೆ

16 SANDOOR 04
ಸಂಡೂರು ಬಿಕೆಜಿ ಗ್ಲೋಬಲ್ ಶಾಲೆ ವಿದ್ಯಾರ್ಥಿಗಳು ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ 6ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 7 ಚಿನ್ನ, 14 ಬೆಳ್ಳಿ, 23 ಕಂಚು ಪದಕಗಳನ್ನು ಪಡೆದಿದ್ದಾರೆ.
Published on

ಸಂಡೂರು: ಬಿಕೆಜಿ ಗ್ಲೋಬಲ್ ಶಾಲೆ ವಿದ್ಯಾರ್ಥಿಗಳು ಶಿವಮೊಗ್ಗದಲ್ಲಿ ಆಯೋಜಿಸಿದ್ದ 6ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕಟಾ ವಿಭಾಗದಲ್ಲಿ 7ಚಿನ್ನ, 9ಬೆಳ್ಳಿ, ಮತ್ತು 13 ಕಂಚು ಪದಕ ಪಡೆದರೆ, ಕುಮಿತೆ ವಿಭಾಗದಲ್ಲಿ 5 ಬೆಳ್ಳಿ ಮತ್ತು 10 ಕಂಚು ಪದಕಗಳನ್ನು ಪಡೆದಿದ್ದಾರೆ. ಕರಾಟೆ ತರಬೇತಿದಾರ ಯು.ಪ್ರವೀಣ್, ತಂಡದ ನಿರ್ವಾಹಕ ಬಿ.ಜಗನ್ನಾಥ್‌ರ ಮಾರ್ಗದರ್ಶನ ನೀಡಿದ್ದರು.

ಕಟಾ ವಿಭಾಗ ಅಂಕುಶ್, ಅನಿರುದ್ಧ, ಶ್ರೇಷ್ಠ ಅವಿನಾಶ್, ರಾಮಚರಣ್, ಜೆ.ಬಿ.ತರುಣ್, ಯು.ಜೆ.ಪ್ರಿಯಾಂಕಾ ಚಿನ್ನದ ಪದಕ, ಶರತ್, ರಿಯಾಸ್, ಸಾಯಿ ಸೃಜನ, ಶ್ರೀಯುತ್, ಸುಹಾಸ್, ಮಾನ್ಯಾ, ನಂದಿನಿ ಆರ್.ಎನ್., ಅಭಿಲಾಷಾ, ವೈಷ್ಣವಿ.ಸಿ ಬೆಳ್ಳಿ ಪದಕ, ದರ್ಶನ, ನವಾಜ, ಕಿಶೋರ, ನಮಿತ್, ಜಿತೇಂದ್ರ, ಅಮೋಘ, ಅಭಿರಾಮ್, ಕಾರ್ತಿಕ್, ಎಂ.ಶ್ವೇತ, ಲಾವಣ್ಯ, ಗಗನಶ್ರೀ, ಜಿ.ಎನ್.ನಂದಿನಿ, ಸಮೃದ್ಧಿನಿ ಕಂಚು ಪದಕ, ಕುಮಿತೆ ವಿಭಾಗದಲ್ಲಿ ಶರತ್, ಶ್ರೇಷ್ಠ, ಅಮೋಘ, ಶ್ರೀಯುತ್, ವೈಷ್ಣವಿ ಬೆಳ್ಳಿ ಪದಕ.ಅಂಕುಶ್, ಅನಿರುದ್ಧ, ನವಾಜ್, ಸಾಯಿ ಸೃಜನ, ರಾಮಚರಣ್, ಜೆ.ಬಿ.ತರುಣ, ಮಾನ್ಯಾ, ಆರ್.ಎನ್.ನಂದಿನಿ, ಅಭಿಲಾಷಾ ಕಂಚು ಪದಕ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net