

ಕೋಲಾರ: ಬಿಜೆಪಿಯವರಿಗೆ ಇತ್ತೀಚೆಗೆ ಬುದ್ಧಿಭ್ರಮಣೆಯಾಗಿದೆ. ಹೀಗಾಗಿ ಸಚಿವ ಪ್ರಿಯಾಂಕ್ ರ್ಖಗೆ ಸೇರಿ ಕಾಂಗ್ರೆಸ್ನ ಎಲ್ಲರ ವಿರುದ್ಧವೂ ಮಾತನಾಡಲು ಶುರು ಮಾಡಿದ್ದಾರೆ. ಶ್ರೀವೇ ಬಿಜೆಪಿ ನಾಯಕರಿಗೆ ಹುಚ್ಚು ಬಿಡಿಸುವ ಔಷಧ ಕೊಡಿಸಬೇಕು ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ವ್ಯಂಗ್ಯವಾಡಿದರು.
ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಚುನಾವಣೆಯಲ್ಲಿ 3 ಸ್ಥಾನಗಳನ್ನೂ ಕಾಂಗ್ರೆಸ್ ಜಯಗಳಿಸುತ್ತದೆ ಎಂದು ಬಿಜೆಪಿಯವರು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಪರ ಇದ್ದಾರೆ. ಆದರೂ ಬಿಜೆಪಿಯವರು ಒಂದಲ್ಲ ಒಂದು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಯಾವುದರಲ್ಲೂ ಸಫಲರಾಗುವುದಿಲ್ಲ. ಕಾರಣ ಬಿಜೆಪಿಯಲ್ಲಿ 3 ಗುಂಪುಗಳಿವೆ ಎಂದು ಲೇವಡಿ ಮಾಡಿದರು.
ಬಿಜೆಪಿಯವರದ್ದು ತಿರುಕನ ಕನಸಾಗಿದ್ದು, ನೂರು ವಿಚಾರಗಳನ್ನು ನಮ್ಮ ವಿರುದ್ಧ ಮಾತನಾಡಿದರೂ ಎದೆಗುಂದುವುದಿಲ್ಲ. ಕೆ.ಎಸ್.ಈಶ್ವರಪ್ಪ ಮೇಲೆ ನೇರವಾಗಿ ಚಾರ್ಜ್ ಮಾಡಿದ್ದರು. ಹಾಗಾಗಿ ರಾಜೀನಾಮೆ ನೀಡಬೇಕಾಯಿತು. ಆದರೆ, ಪ್ರಿಯಾಂಕ್ ರ್ಖಗೆ ಬಹಳ ಆಕ್ಟಿವ್ ಲೀಡರ್, ಕ್ಲೀನ್ ಹ್ಯಾಂಡ್. ಧೈರ್ಯವಾಗಿ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಇವರ ಭಯಕ್ಕೆ ರ್ಖಗೆ
ಹೆದರುವುದಿಲ್ಲ ಎಂದರು.
ಜಿಲ್ಲೆಗೆ ಸಚಿವ ಸ್ಥಾನ ನೀಡಲಿ
ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಒಳ್ಳೆಯ ಜಿಲ್ಲಾ ಮಂತ್ರಿಗಳಿದ್ದಾರೆ. ಆದರೆ, ಜಿಲ್ಲೆಯಲ್ಲಿ 4 ಮಂದಿ ಶಾಸಕರಿದ್ದರೂ ಜಿಲ್ಲೆಯವರಿಗೆ ಸಚಿವ ಸ್ಥಾನ ಇಲ್ಲದಿರುವುದು ನೋವಿನ ಸಂಗತಿ. ಮುಂದೆ ಹೈಕಮಾಂಡ್ ಯಾರಿಗೇ ಸಚಿವ ಸ್ಥಾನ ನೀಡಿದರೂ ಒಪ್ಪಿಕೊಳ್ಳುತ್ತೇವೆ ಎಂದು ಶಾಸಕ ನಂಜೇಗೌಡ ತಿಳಿಸಿದರು.
ದಾವೆ ಇತ್ಯರ್ಥವಾದರೆ ಚುನಾವಣೆ
ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಬೇಕೆನ್ನುವುದು ನಮ್ಮ ಬೇಡಿಕೆ ಹಾಗೂ ಮುಖ್ಯಮಂತ್ರಿಗಳ ಉದ್ದೇಶವೂ ಆಗಿದೆ. ಹೊರ ರಾಜ್ಯಗಳಲ್ಲಿ ನಮ್ಮ ರಾಜ್ಯಕ್ಕಿಂತಲೂ ಹೆಚ್ಚಿನ ದರವಿದೆ. ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ತೀಮಾರ್ನ ಮಾಡಲಿದ್ದಾರೆ. ಕೋಚಿಮುಲ್ ಆಡಳಿತ ಮಂಡಳಿಗೆ ಚುನಾವಣೆ ನಡೆಯುವ ಸಂಬಂಧ ನ್ಯಾಯಾಲಯದಲ್ಲಿನ ಪ್ರಕರಣ ಇತ್ಯರ್ಥವಾದ ಕೂಡಲೇ ಚುನಾವಣೆ ನಡೆಯಲಿದೆ ಎಂದು ಶಾಸಕರು ಸ್ಪಷ್ಟಪಡಿಸಿದರು.
ಸೋಲಾರ್ ನಿರ್ಮಿಸಲು ಜಾಗ ಮಂಜೂರು
ಕೋಚಿಮುಲ್ ಸರ್ಕಾರದ ಅಂಗಸಂಸ್ಥೆ. ರೈತರ ಹಾಲು ಉತ್ಪಾದಕರ ಅನುಕೂಲಕ್ಕಾಗಿ ದೇಶದಲ್ಲೇ ಪ್ರಥಮಬಾರಿಗೆ ಕೋಲಾರ ತಾಲೂಕಿನಲ್ಲಿ ಸೋಲಾರ್ ಘಟಕ ಸ್ಥಾಪಿಸಲಾಗುತ್ತಿದೆ. ಅದಕ್ಕಾಗಿ ಜಮೀನು ನೀಡಲಾಗಿದೆ ಹೊರತು ಕಾಂಗ್ರೆಸ್ ಶಾಸಕ ನಂಜೇಗೌಡರಿಗೆ ಕೊಟ್ಟಿಲ್ಲ ಎನ್ನುವುದನ್ನು ಅದರ ಬಗ್ಗೆ ಮಾತನಾಡುವವರು ಅರಿತುಕೊಳ್ಳಬೇಕೆಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಪ್ರಯಾಣಿಕರಿಗೆ ಹೊರೆಯಾಗದಂತೆ ಪ್ರಯಾಣ ದರ ಏರಿಕೆ
ಬಸ್ ಟಿಕೆಟ್ ದರ ಏರಿಕೆ ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಆಗಿರುವುದಲ್ಲ. ಈ ಪ್ರಕ್ರಿಯೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ತೃಪ್ತಿಯಾಗಿದ್ದಾರೆ, ಪುರುಷರು ವಿರೋಧ ಮಾಡುತ್ತಿಲ್ಲ. ಬಸ್ಸಿನಂತೆಯೇ ರೈಲಿನ ಟಿಕೆಟ್ ದರವೂ ಏರಿಕೆಯಾಗಿದೆಯಲ್ಲವೇ ಎಂದು ಪ್ರಶ್ನಿಸಿ ಟಿಕೆಟ್ ದರ ಹೆಚ್ಚಳದಿಂದ ಸಾರ್ವಜನಿಕರಿಗೆ ಹೊರೆಯಾಗದೆ, ಇನ್ನಷ್ಟು ಸೌಲಭ್ಯ ಸಿಕ್ಕಂತಾಗುತ್ತದೆ ಎಂದು ಕೆ.ವೈ.ನಂಜೇಗೌಡ ಹೇಳಿದರು. ಸಾರಿಗೆ ನೌಕರರ ಮುಷ್ಕರವು ವಿವಿಧ ಬೇಡಿಕೆಗಳಿಗಾಗಿಯೇ ಹೊರತು ವೇತನದ ವಿಚಾರವಾಗಿ ಅಲ್ಲ. ಬಿಜೆಪಿಯವರಿಗೆ ಬೇರೆ ಏನೂ ಕೆಲಸವಿಲ್ಲ. ಹೀಗಾಗಿ ಇಂತಹ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಅದನ್ನು ಬಿಟ್ಟು ಕೇಂದ್ರದ ಮೇಲೆ ಒತ್ತಡ ಹಾಕಿ ಪೆಟ್ರೋಲ್&ಡೀಸೆಲ್ ಬೆಲೆ ಕಡಿಮೆ ಮಾಡಿಸಲಿ ಎಂದು ಟಾಂಗ್ ನೀಡಿದರು.