ಚಾಮುಂಡೇಶ್ವರಿ ಕ್ಷೇತ್ರ ಬಿಜೆಪಿಯಿಂದ ತಿರಂಗಾ ಯಾತ್ರೆ

33
Published on

ಮೈಸೂರು: ಪಹಲ್ಗಾಮ್ ದಾಳಿಗೆ ಭಾರತ ನಡೆಸಿದ ಆಪರೇಷನ್ ಸಿಂಧೂರ ಯಶಸ್ಸಿಗೆ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿಯಿಂದ ನಗರದಲ್ಲಿ ಶುಕ್ರವಾರ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು.

ಹೂಟಗಳ್ಳಿಯ ಕೆಎಚ್‌ಬಿ ಕಾಲನಿ ಸಂತೆಮಾಳದಿಂದ ಆರಂಭಗೊಂಡ ತಿರಂಗಾ ಯಾತ್ರೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಸರಸ್ವತಿ ಕನ್ವೆನ್ಷನ್ ಹಾಲ್‌ನಲ್ಲಿ ಅಂತ್ಯಗೊಂಡಿತು.

ಸೈನಿಕ ಆಕಾಡೆಮಿ ಸಂಸ್ಥೆ ಸಂಸ್ಥಾಪಕರಾದ ಮಾಜಿ ಕಮಾಂಡೋ ಸಿ.ಎಂ.ಶ್ರೀಧರ್, ನಿವೃತ್ತ ಸೈನಿಕ ರವಿ ಉತ್ತಪ್ಪ ಅವರು ಹಾಜರಿದ್ದು, ಭಾರತೀಯ ಸೈನಿಕರ ಸಾಹಸ, ದೇಶಭಕ್ತಿಯ ಬಗ್ಗೆ ತಿಳಿಸಿಕೊಟ್ಟರು.

ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಅವರು, ಪಾಕಿಸ್ತಾನ ಸ್ವಾತಂತ್ರ್ಯ ನಂತರದ ಆರಂಭದಿಂದಲೇ ಭಯೋತ್ಪಾದನೆ ಶುರು ಮಾಡಿತು. ಭಾರತದ ಮುಕುಟ ಮಣಿ ಜಮ್ಮು ಮತ್ತು ಕಾಶ್ಮೀರವನ್ನು ತನ್ನ ದೇಶಕ್ಕೆ ಸೇರಿಸಿಕೊಳ್ಳಲು ಹಿಂದಿನಿಂದಲೂ ಹವಣಿಸುತ್ತಿದೆ. ಇದಕ್ಕೆ ಭಾರತ ಕೂಡಾ ತಿರುಗೇಟು ನೀಡುತ್ತಾ ಬಂದಿದೆ. ಇದುವರೆಗೆ ಮೂರು ಯುದ್ಧದಲ್ಲಿಯೂ ಪಾಕಿಸ್ತಾನ ಭಾರತದ ಎದುರು ಸೋತಿದೆ ಎಂದರು.

ವಿಶ್ವದ ಭೂಪದಟದಿಂದ ಪಾಕಿಸ್ತಾನವನ್ನೇ ಅಳಿಸಿ ಹಾಕುವ ಶಕ್ತಿ ಭಾರತಕ್ಕೆ ಇದೆ. ಆದರೆ ಭಾರತ ಮಾನವೀಯತೆಗೆ, ಸರ್ವಧರ್ಮಕ್ಕೆ ಬೆಲೆ ಕೊಡುವ ದೇಶವಾಗಿದ್ದು, ಅದರ ಮೇಲೆ ಬಲವಂತ ಪ್ರಹಾರ ಮಾಡಿಲ್ಲ ಎಂದು ಹೇಳಿದರು.

ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಏರ್‌ಸ್ಟ್ರೈಕ್ ದಾಳಿ ಮಾಡಿ ಭಾರತ ತನ್ನ ವಿಶ್ವ ರೂಪವನ್ನು ಜಗತ್ತಿಗೆ ತೋರಿಸಿದೆ. ಭಾರತದ ಸೈನ್ಯದ ಸೈನಿಕರಿಗೆ ಇರುವ ಧೈರ್ಯ, ಸಾಹಸ, ಮಾತೃಭೂಮಿಯ ಮೇಲೆ ಅಪಾರ ಗೌರವ ಇಟ್ಟುಕೊಂಡಿದೆ. ಭಾರತದಾದ್ಯಂತ ಸೈನಿಕರಿಗೆ ಗೌರವ ಸಲ್ಲಿಸುವುದಕ್ಕೋಸ್ಕರ ತಿರಂಗಯಾತ್ರೆ ನಡೆಸಲಾಗುತ್ತಿದೆ ಎಂದರು.

ಮೈಸೂರು ಕೊಡಗು ಸಂಸದ ಯದವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಯೋಗ ನರಸಿಂಹಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಶ್ರೀನಿವಾಸ್, ಬಿಜೆಪಿ ಚಾಮುಂಡೇಶ್ವರಿ ಮಂಡಲದ ಅಧ್ಯಕ್ಷ ಪೈ.ಟಿ.ರವಿ, ನಗರ ಬಿಜೆಪಿ ಪ್ರದಾನ ಕಾರ್ಯದರ್ಶಿ ಬಿ.ಎಂ.ರಘು, ಮುಖಂಡರಾದ ಕವೀಶ್‌ಗೌಡ, ಹಿರಿಯ ಮುಖಂಡರಾದ ಎಸ್.ಅರ್.ಗೋಪಾಲ್ರಾವ್, ಹಿನಕಲ್ ಶ್ರೀನಿವಾಸ್, ನಿಕಟಪೂರ್ವ ಅದ್ಯಕ್ಷ ಗೆಜ್ಜಗಳ್ಳಿ ಮಹೇಶ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಹೇಮಂತ್‌ಗೌಡ, ಶಿವಕುಮಾರ್, ಉಪಾಧ್ಯಕ್ಷರಾದ ಕೂರ್ಗಳ್ಳಿ ರೇವಣ್ಣ, ಹಿನಕಲ್ ಗಣೇಶ್, ಮಾಜಿ ಅಧ್ಯಕ್ಷ ರಾಜಕುಮಾರ್, ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ಹೂಟಗಳ್ಳಿ ದಿಲ್ದಾರ್ ರವಿ, ಬೆಳವಾಡಿ ಶ್ರೀನಿವಾಸ್, ಯುವ ಮೋರ್ಚಾ ಮಾಜಿ ಅಧ್ಯಕ್ಷ ದಾರಿಪುರ ಡಿ.ಚಂದ್ರಶೇಖರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಪಟ್ಟೇಗೌಡ, ಮುಖಂಡರಾದ ಮೋಹನ್‌ಕುಮಾರ್, ಮಾದಹಳ್ಳಿ ನಂಜುಡಸ್ವಾಮಿ,ಗುರೂರು ಶಿವಕುಮಾರ್, ಆಲನಹಳ್ಳಿ ಮಹದೇವಸ್ವಾಮಿ, ನಾರಾಯಣ್, ಹೂಟಗಳ್ಳಿ ಕೃಷ್ಣಕುಮಾರ್, ವೇದರಾಜ್, ಬೋಗಾದಿ ನಂದೀಶ್, ವೆಂಕಟೇಶ್‌ರಾವ್, ಶಾಲಿನಿಕುಮಾರ್, ಬ್ಯಾತಹಳ್ಳಿ ಮದುಕುಮಾರ್,ದೂರ ವೃಷಬೇಂದ್ರ, ವೀರಭದ್ರ ಸ್ವಾಮಿ, ನಾರಾಯಣ್,ಗುರುಸ್ವಾಮಿ, ಬಸವರಾಜು,ಮೆಡಿಕಲ್ ಶಿವು, ಸೈನಿಕ ಆಕಾಡೆಮಿ ವಿದ್ಯಾರ್ಥಿ ಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net