ಬಿಜೆಪಿಯಿಂದ ತಿರಂಗಾ ಯಾತ್ರೆ ಬೈಕ್ ರ‍್ಯಾಲಿ

6 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾಯÁðಚರಣೆ ನಡೆಸಿದ ಭಾರತೀಯ ಸೇನೆಯ ಪರಾಕ್ರಮ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಕೆ ಮತ್ತು ವಿಜಯೋತ್ಸವದ ಅಂಗವಾಗಿ ಧಾರವಾಡ- 71ರ ವತಿಯಿಂದ ಶುಕ್ರವಾರ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.

`ರಾಷ್ಟç ರಕ್ಷಣೆಗಾಗಿ ನಾಗರಿಕರು' ಎಂಬ ಧ್ಯೇಯದೊಂದಿಗೆ ಆಯೋಜಿಸಿದ್ದ ತಿರಂಗಾ ಯಾತ್ರೆಗೆ ತಾಲೂಕಿನ ಬೇಲೂರು ಕ್ರಾಸ್ ಬಳಿ ಶಿಂಗನಹಳ್ಳಿ ಗ್ರಾಮದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಭಾರತೀಯ ಸೇನೆಯ ನಿವೃತ್ತ ಹಾಗೂ ಸೇವೆಯಲ್ಲಿರುವ ಸೈನಿಕರು, ದೇಶಾಭಿನಗಳೊಂದಿಗೆ ಹೊರಟ ತಿರಂಗಾ ಯಾತ್ರೆಯು ನರೇಂದ್ರ ಕ್ರಾಸ್, ಅಗ್ರಿ ಕಾಲೇಜ್, ಹೊಸ ಬಸ್ ನಿಲ್ದಾಣ, ವಿಶ್ವಕರ್ಮ ವೃತ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಮಹಾರಾಣಾ ಪ್ರತಾಪ್ ವೃತ್ತ, ವಿವೇಕಾನಂದ ವೃತ್ತ, ಹಳೇ ಬಸ್ ನಿಲ್ದಾಣ, ಜ್ಯುಬಿಲಿ ವೃತ್ತ ಮೂಲಕ ಹಾಯ್ದು ಕಲಾಭವನದಲ್ಲಿ ಸಮಾರೋಪಗೊಂಡಿತು.

ಈ ವೇಳೆ 82 ಮಾಜಿ ಯೋಧರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಶಂಕರ ಶೇಳಕೆ, ಶಂಕರ ಕೋಮಾರದೇಸಾಯಿ, ಸುನೀಲ ಮೋರೆ, ಶ್ರೀನಿವಾಸ ಕೋಟ್ಯಾನ್, ಬಸವರಾಜ ಗುಂಡಗೋವಿ, ಬಸವರಾಜ ಬಾಳಗಿ, ಮಂಜು ನಡಟ್ಟಿ, ಹರೀಶ ಬಿಜಾಪುರ, ಹಾಲಿ ಹಾಗೂ ಮಾಜಿ ಯೋಧರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net