ಹಿಂದು, ಮುಸ್ಲಿಂ, ಪಾಕಿಸ್ತಾನದ ಹೆಸರಿನಲ್ಲಿಯೇ ಬಿಜೆಪಿ ರಾಜಕಾರಣ: ಸಚಿವ ಸಂತೋಷ್ ಲಾಡ್ ಟೀಕೆ

IMG_20250912_000349.jpg
Published on

ಚಿಕ್ಕಬಳ್ಳಾಪುರ: ಹಿಂದು ಹಾಗೂ ಮುಸ್ಲಿಂ, ಪಾಕಿಸ್ತಾನದ ಹೆಸರಿನಲ್ಲಿಯೇ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟ್‌ ಬ್ಯಾಂಕ್‌ ಗಾಗಿ ದಿನ ಬೆಳೆಗಾದರೆ ಧರ್ಮದ ಹೆಸರಿನ್ನು ಹೇಳಲಾಗುತ್ತಿದೆ. ಹಿಂದುಗಳ ಬಗ್ಗೆ ಅಭಿಮಾನವಿದ್ದರೆ ಸಣ್ಣ ಸಣ್ಣ ಗುಡಿಗಳನ್ನು ಮೇಲ್ವರ್ಗದವರಿಂದ ತಳ ಸಮುದಾಯದವರಿಗೆ ಬಿಟ್ಟು ಕೊಡಲು ಸಿದ್ಧರಿದ್ದಾರೆಯೇ? ಯಾರ ಅವಧಿಯಲ್ಲಿ ಹೆಚ್ಚಿನ ಗುಡಿಗಳನ್ನು ನಿರ್ಮಿಸಲಾಯಿತು? ಯಾರು ಕಟ್ಟಿದ್ದರು?. ಕಾಂಗ್ರೆಸ್‌ ಸರ್ಕಾರಗಳಿರುವ ರಾಜ್ಯಕ್ಕೆ ಬಿಜೆಪಿ ಆಡಳಿತ ನಡೆಸುತ್ತಿರುವ ಭಾಗಗಳಿಂದ ಬಡ ಮತ್ತು ಮಧ್ಯಮ ವರ್ಗದವರು ಏಕೆ ವಲಸೆ ಬರುತ್ತಿದ್ದಾರೆ?. ಮೋದಿ ಪಾಕಿಸ್ತಾನಕ್ಕೆ ಹೋಗಿ ಕೇಕ್‌, ಬಿರಿಯಾನಿ ತಿಂದು ಬರಲಿಲ್ಲವೇ?. ಮುಸ್ಲಿಮ್‌ ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ತರಿಸಿಕೊಳ್ಳುತ್ತಿಲ್ಲವೇ?. ಮುಸ್ಲಿಮ್‌ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ವಾಪಸ್‌ ಕರೆಸಿಕೊಳ್ಳಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ದೇಶ, ರಾಜ್ಯಗಳ ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ಹೋಗದೇ ಮುಸ್ಲಿಂ ಹಾಗೂ ಪಾಕಿಸ್ತಾನದ ಹೆಸರಿನಲ್ಲಿಯೇ ರಾಜಕಾರಣ ಮಾಡುವುದನ್ನು ಪ್ರಶ್ನಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

*ಸಂಸದರು, ಬೆಂಬಲಿಗರ ಕೆಲಸ ಸಲೀಸು 
ಸಂಸದ ಡಾ ಕೆ.ಸುಧಾಕರ್‌ ಹಾಗೂ ಅವರ ಬೆಂಬಲಿಗ ನಾಯಕರ ಕೆಲಸಗಳನ್ನು ಹಣ ಪಡೆಯದೇ ಸಲೀಸಾಗಿ ಮಾಡಿಕೊಡಲಾಗಿದೆ. ರಾಜಕಾರಣವೇ ಬೇರೆ, ಉದ್ಯಮವೇ ಬೇರೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಅಯ್ಯರ್‌ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಚದಲಪುರ ಕ್ರಾಸ್‌ ಸಮೀಪ ಸಂಸದರು ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಲು ೧೧ ಎಕರೆ ಜಾಗದ ಭೂ ಪರಿವರ್ತನೆ ಕೆಲಸವನ್ನು ಸಲೀಸಾಗಿ ಮಾಡಿಕೊಡಲಾಗಿದೆ. ನಗರಸಭಾ ಅಧ್ಯಕ್ಷರ ಬಡಾವಣೆಗಳಿಗೂ ಅನುಮೋದನೆ ನೀಡಲಾಗಿದೆ. ಇದಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿಲ್ಲ. ಹಣವನ್ನೂ ಪಡೆದುಕೊಂಡಿಲ್ಲ. ಬಹುತೇಕ ಸಂಸದರ ಬೆಂಬಲಿಗರು ನಿರಂತರ ಸಂಪರ್ಕದಲ್ಲಿದ್ದು ಅನಿವಾರ್ಯವಾಗಿ ಟೀಕಿಸುವ, ವಿರೋಧಿಸುವುದರ ಬಗೆಗಿನ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net