ಕಾಂಗ್ರೆಸ್ ಟೀಕಿಸುವುದಷ್ಟೆ ಬಿಜೆಪಿಯವರ ಕೆಲಸ: ಸಚಿವ ಸಂತೋಷ ಲಾಡ್

17 Dwd 2 Santosh Lad
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೇಂದ್ರ ಬಿಜೆಪಿಯ 10 ವರ್ಷಗಳ ಸಾಧನೆ ಕೇಳಿದರೆ 70 ವರ್ಷಗಳ ಕತೆ ಹೇಳುತ್ತಾರೆ. ಮೂಲ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಽ ಅವರನ್ನು ಟೀಕಿಸುವುದಷ್ಟೆ ಬಿಜೆಪಿಯವರ ಕೆಲಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಪರ ಎಂದು ಹೇಳುತ್ತಾರೆ. ಆದರೆ, ಹಿಂದುಗಳು ಬಡತನದಲ್ಲಿಯೇ ಇದ್ದಾರೆ. ಪ್ರಧಾನಿ ಮೋದಿಯವರು ಹಿಂದುಗಳಿಗೆ ಕೆಲಸ ಕೊಟ್ಟಿದ್ದಾರಾ? ಅಥವಾ ಉದ್ಯೋಗ ಕೊಟ್ಟಿದ್ದಾರಾ? ಇವರು ಅಽಕಾರಕ್ಕೆ ಬಂದ ಬಳಿಕ ಹಿಂದುಗಳು ಮಧ್ಯಮ ವರ್ಗದಿಂದ ಬಡತನಕ್ಕೆ ಹೋಗಿದ್ದಾರೆ. ದೇಶದ ವ್ಯವಸ್ಥೆಗೆ ಯಾರೋ ಒಬ್ಬರು ಅನಿವಾರ್ಯ ಅಲ್ಲ. ವ್ಯವಸ್ಥೆ ನಡೆಯಲು ಅನುಕೂಲಕರ ಪಾಲಿಸಿಗಳನ್ನು ಮಾಡಬೇಕು ಎಂದರು.

ಮೋದಿಯವರೇ ದೇವರು, ಅವರಿಂದ ದೇಶ ನಡಿಯುತ್ತಿದೆ ಎಂದು ಬಿಂಬಿಸಿದ್ದಾರೆ. ಟೆಲಿಪ್ರಾಂಪ್ಟರ್ ಇಲ¯್ಲದೆ ಮೋದಿಯವರಿಗೆ ಭಾಷಣ ಮಾಡಲು ಬರುವುದಿಲ್ಲ. ಅವರು ಒಮ್ಮೆಯಾದರೂ ಸುದ್ದಿಗೋಷ್ಠಿ ಮಾಡಿಲ್ಲ. ಮನಮೋಹನಸಿಂಗ್ 120ಕ್ಕೂ ಹೆಚ್ಚು ಸುದ್ದಿಗೋಷ್ಠಿ ಮಾಡಿದ್ದಾರೆ. ವಿದೇಶಕ್ಕೆ ಹೋಗುವಾಗ, ವಾಪಸ್ ಬಂದಾ ಸುದ್ದಿಗೋಷ್ಠಿ ಮಾಡಬೇಕು. ಆದರೆ, ಮೋದಿಯವರು ಯಾವಾಗ ಹೋದರು? ಯಾವಾಗ ಬಂದರು ಗೊತ್ತಾಗುವುದಿಲ್ಲ. ಅವರದೇ ಕ್ಯಾಮರಾ, ಅವರದೇ ಎಡಿಟೆಡ್ ವಿಡಿಯೋ. ಅದನ್ನೇ ಮಾಧ್ಯಮಗಳು ತೋರಿಸಬೇಕಾದ ಸ್ಥಿತಿ ಇದೆ ಎಂದು ಟೀಕಿಸಿದರು.

ರಾಜಕೀಯ ಪ್ರೇರಿತ ಭಾಷಣ ಬೇಡ: ಕೃಷಿ ವಿಶ್ವವಿದ್ಯಾಲಯ ಕಾರ್ಯಕ್ರಮದಲ್ಲಿ ಉಪ ರಾಷ್ಟçಪತಿ ಜಗದೀಪ ಧನಕರ್ ಅವರು ರಾಜಕೀಯ ಪ್ರೇರಿತ ಭಾಷಣ ಮಾಡಿದ್ದಾರೆ. ಅವರ ಮಾತನ್ನು ವೈಯಕ್ತಿಕವಾಗಿ ಟೀಕಿಸುವುದಿಲ್ಲ. ಮಾತನಾಡಿದ್ದು ಕೇಬಲ ರಾಜಕೀಯ ಮತ್ತು ಮೋದಿಯವರ ಬಗ್ಗೆ. ಈ ರೀತಿ ಏಕೆ ಸುಳ್ಳು ಹೇಳಿ ಹೋಗುತ್ತಾರೆ ಎನ್ನುವುದು ನಮ್ಮ ವಾದ ಎಂದು ಸಚಿವ ಲಾಡ್ ಹೇಳಿದರು.

ಎಲ್ಲದಕ್ಕೂ ಬೇರೆ ದೇಶಗಳಿಗೆ ಹೋಲಿಕೆ ಮಾಡುವ ಬಿಜೆಪಿಯವರು ಚೀನಾದೊಂದಿಗೆ ಏಕೆ ಹೋಲಿಕೆ ಮಾಡುವುದಿಲ್ಲ? ನೀರಾವರಿ ಯೋಜನೆಗಳು, ಸಂಶೋಧನೆಗಳಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ? 11 ವರ್ಷಗಳಲ್ಲಿ ಯಾವ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ? ಈ ಬಗ್ಗೆ ಕೇಳಿದರೆ ಉತ್ತರ ಕೊಡದೆ ಕಾಂಗ್ರೆಸ್ ವಿರುದ್ಧ ಮಾತನಾಡಿ ಹೋಗುತ್ತಾರೆ ಎಂದರು.

ಬೃಹತ್ ಉದ್ಯೋಗ ಮೇಳ:

ಸಂತೋಷ ಲಾಡ್ ಫೌಂಡೇಷನ್‌ನಿAದ ಜ. 18ರಂದು ಕಲಘಟಗಿಯ ಜನತಾ ಇಂಗ್ಲಿಷ್ ಸ್ಕೂಲ್‌ನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಚಿವ ಲಾಡ್ ಹೇಳಿದರು. 50ಕ್ಕೂ ಹೆಚ್ಚು ಉದ್ಯೋಗದಾತ ಕಂಪನಿಗಳು ಭಾಗವಹಿಸಲಿವೆ. 4,000ಕ್ಕೂ ಹೆಚ್ಚು ಉದ್ಯೋಗಾವಕಾಶವಿದ್ದು, ವಿದ್ಯಾರ್ಹತೆಗೆ ಅನುಗುಣವಾಗಿ ನೇಮಕಾತಿ ನಡೆಯಲಿದೆ ಎಂದು ಸಚಿವ ಲಾಡ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net